ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮೂರನೇ ಬಾರಿ ಇಡಿ ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಇಡಿ ವಿಚಾರಣೆಗೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್. ಪದೇ ಪದೇ ಇಡಿ ನೋಟೀಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳುತ್ತಿದೆ. ನನ್ನ ಜೊತೆ ಜನ ವ್ಯವಹಾರ ಮಾಡಲು ಹೆದರುತ್ತಿದ್ದಾರೆ. ಹಲವರು ಫೋನ್ ರಿಸೀವ್ ಮಾಡಲು ಭಯ ಪಡುತ್ತಿದ್ದಾರೆ. ನನ್ನ ನೋವೇನು ಎಂದು ನಿಮ್ಮ ಬಳಿ ಹೇಳಿದರೆ ಪ್ರಯೋಜನವಾಗುತ್ತಾ? ಈ ನೋವು ಎಂಥಾದ್ದು ಎಂಬುದು ನನಗೆ ಮಾತ್ರ ಗೊತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದಾದ ಮೇಲೆ ಒಂದರಂತೆ ಇಡಿ ಅಧಿಕಾರಿಗಳು ನೋಟೀಸ್ ನೀಡುತ್ತಿದ್ದಾರೆ. ಯಂಗ್ ಇಂಡಿಯಾಗೆ ದೇಣಿಗೆ ನೀಡಿದ ವಿಚಾರವಾಗಿ ವಿಚಾರಣೆಗೆ ಕರೆದಿದ್ದಾರೆ. ಯಂಗ್ ಇಂಡಿಯಾಗೆ ದೇಣಿಗೆ ಕೊಟ್ಟರೆ ತಪ್ಪೇನಿದೆ? ಕಾನೂನು ಗೌರವಿಸಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದರು.