ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಸದನದಲ್ಲಿ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಸಿಎಂ ಗೆ ಕಾನೂನು ಜ್ಞಾನವಿದೆಯೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ನನ್ನ ಅವಧಿಯಲ್ಲಿ ಒಂದೇ ಒಂದು ಎಕರೆ ಕೂಡ ಡಿನೊಟಿಫೈ ಆಗಿಲ್ಲ. 852 ಎಕರೆ ಡಿನೊಟಿಫೈ ಮಾಡಿದ್ದೇನೆ ಅಂತ ಆರೋಪ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಜವಾಬ್ದಾರಿಯಿಂದ ಮಾತನಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಇವರ 40% ಕಮಿಷನ್ ಬಗ್ಗೆ ಧ್ವನಿ ಎತ್ತಿದೆವು ಅದಕ್ಕೆ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪಿ ಎಸ್ ಐ ಹಗರಣ, ಬಿಟ್ ಕಾಯಿನ್ ಹಗರಣಗಳನ್ನು ಮುಚ್ಚಿ ಹಾಕಲೆಂದು ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ 8 ಕೇಸ್ ಸಿಬಿಐಗೆ ಕೊಟ್ಟಿದ್ದೆ ಎಲ್ಲಾ ಕೇಸ್ ಗಳಲ್ಲೂ ಬಿ ರಿಪೋರ್ಟ್ ಬಂದಿದೆ. ಇವರು ಒಂದು ಕೇಸನ್ನಾದರೂ ಸಿಬಿಐ ತನಿಖೆಗೆ ಕೊಟ್ಟಿದ್ದಾರಾ? ಪ್ರಧಾನಿ ಮೋದಿ ಚೌಕಿದಾರ್ ಎನ್ನುತಾರೆ ಲೋಕಪಾಲ್ ಅನ್ನು ಯಾಕೆ ಜಾರಿಗೆ ತಂದಿಲ್ಲ? ಎಂದು ಪ್ರಶ್ನಿಸಿದರು. ನನ್ನ ಅವಧಿಯಲ್ಲಿ ಯಾವುದೇ ಡಿನೋಟಿಫಿಕೇಷನ್ ಆಗಿಲ್ಲ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕುಮಾರಸ್ವಾಮಿ ಕಾಲದಲ್ಲಿ ಡಿನೊಟಿಫೈ ಆಗಿರುವುದು ಎಂದು ತಿಳಿಸಿದ್ದಾರೆ.