ಚಿಕ್ಕಮಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲಾಖಾನ್ ಎಂದು ಕರೆದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ಕೆಂಡ ಕಾರುರುವ ರಾಜ್ಯ ಕಾಂಗ್ರೆಸ್, ಬಿಜೆಪಿ ನಾಯಕರ ಹೆಸರಿಗೆ ಮುಸ್ಲಿಂ ಹೆಸರು ಹಾಕಿ ಟ್ವೀಟ್ ಮೂಲಕ ಕಿಡಿ ಕಾರಿದೆ. ಕಾಂಗ್ರೆಸ್ ಟ್ವೀಟ್ ಗೆ ಮತ್ತೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಬಿಜೆಪಿ ನಾಯಕರ ಸ್ವಭಾವ ಹಾಗೆ ಇದ್ದರೆ ಕಾಂಗ್ರೆಸ್ ನಾಯಕರು ಹಾಗೆ ಕರೆಯಲಿ. ಮುಲ್ಲಾಗಳ ಮೇಲೆ ಪ್ರೀತಿ ಜಾಸ್ತಿ ಇದ್ದರೆ ಖಂಡಿತಾ ಕರೆಯಬಹುದು. ನನ್ನನ್ನು ಮುಲ್ಲಾ ಎಂದು ಕರೆಯಲು ಆಗಲ್ಲ ಹಿಂದೂ ಹುಲಿ ಎನ್ನಬಹುದು. ಮುಲ್ಲಾ ಎಂದು ಕರೆದರೆ ನನ್ನನ್ನು ಮುಲ್ಲಾಗಳೂ ಕೂಡ ಒಪ್ಪಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಮ್ಮ ಸ್ವಭಾವಕ್ಕೆ ತಕ್ಕಂತೆ ಬಿರುದು ಬರುತ್ತದೆ. ಶಾಧಿ ಭಾಗ್ಯ ಮಾಡಿದವರಿಗೆ ಮುಲ್ಲಾ ಹೆಸರು ಅನ್ವಯ ಆಗಲಿದೆ. ಬೆಂಕಿ ಹಾಕಿದರೂ ಕೂಡ ಅಮಾಯಕರು ಎನ್ನುವವರಿಗೆ ಅನ್ವಯ ಆಗಲಿದೆ. ಪ್ರೀತಿಯಿಂದ ಮುಸ್ಲಿಂ ಟೋಪಿ ಹಾಕಿಕೊಳ್ಳೋರಿಗೆ ಅನ್ವಯ ಆಗಲಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.