ಬೆಂಗಳೂರು: ಚುನಾವಣೆಯಲ್ಲಿ ನಾವು ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದನ್ನು ನಾವು ಇವರನ್ನು ಕೇಳಿ ನಿಲ್ಲಿಸಬೇಕೇ ? ನಮ್ಮ ಪಕ್ಷದ ಬಗ್ಗೆ ಮಾತನಾಡಲು ನನಗೆ ಆರ್ಡರ್ ಮಾಡಲು ಸಿದ್ದರಾಮಯ್ಯ ಯಾರು ? ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಿಂದ ಉಪಚುನಾವಣೆಯಲ್ಲಿ ಎಲ್ಲಿ ಯಾವ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂಬುದು ನಮಗೆ ಗೊತ್ತು. ಎಲ್ಲಿ ಯಾವ ಅಭ್ಯರ್ಥಿಯನ್ನು ಹಾಕಬೇಕು ಎಂದು ನಾನು ಇವರ ಮುಂದೆ ಅರ್ಜಿ ಹಿಡಿದುಕೊಂಡು ನಿಲ್ಲಬೇಕಿಲ್ಲ. ನಮ್ಮ ಪಕ್ಷದ ವಿಚಾರಕ್ಕೆ ತಲೆ ಹಾಕುವುದಕ್ಕೆ ಸಿದರಾಮಯ್ಯ ಯಾರು ? ಮೊದಲು ಸಿದ್ದರಾಮಯ್ಯ ನನ್ನ ಬಗ್ಗೆ, ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.
ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ನಾಲ್ಕು ಸೀಟು ಗೆದ್ದಿದ್ದೇವೆ. ಬಿಜೆಪಿ, ಕಾಂಗ್ರೆಸ್ ದೊಣ್ಣೆ ನಾಯಕರ ಕೇಳಿ ನಾವು ಅಭ್ಯರ್ಥಿಗಳನ್ನು ಹಾಕಬೇಕಿಲ್ಲ. ನನ್ನ ಪಕ್ಷದಿಂದ ಯಾರನ್ನು ಬೇಕಾದರೂ ಕಣಕ್ಕಿಳಿಸುತ್ತೇನೆ ಎಂದು ಗುಡುಗಿದರು.
ʼಪುನರ್ಜನ್ಮʼದ ಬಗ್ಗೆ ಮಗ ಹೇಳಿದ ಕಥೆ ಕೇಳಿ ದಂಗಾದ ತಾಯಿ
ಜಾಹೀರಾತು ನೀಡಲು ಕೋಟ್ಯಂತರ ರೂಪಾಯಿ ಹಣವಿದೆ, ಮಣ್ಣಿನ ಮಕ್ಕಳು ಮೋಸ ಮಾಡಿದ್ರು, ಖಜಾನೆ ಖಾಲಿಯಾಗಿದೆ ಎಂದು ಕರ್ನಾಟಕದ ಸಿದ್ಧಹಸ್ತರು ಹೇಳುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರೇ ಎತ್ತಿನಹೊಳೆ ಗುದ್ದಲಿ ಪೂಜೆ ಮಾಡಿದ್ರಲ್ಲ ಏನಾಯ್ತು ? ನನಗೆ ಸಿಕ್ಕಿದ್ದು ತಾತ್ಕಾಲಿಕ ಅಧಿಕಾರ. ನೀವು ಖಜಾನೆ ಭರ್ತಿ ಮಾಡಿ ಹೋಗಿದ್ದಕ್ಕೆ 7 ಕೆಜಿ ಅಕ್ಕಿ ಹಣ ನೀಡಲು ಸಾಧ್ಯವಾಗಲಿಲ್ಲ. ಆದರೆ ನೀವೇನು ಮಾಡಿದ್ರಿ ? ಎಂದು ಪ್ರಶ್ನಿಸಿದ್ದಾರೆ.
ಸುಮ್ಮನೆ ಕಾಲ ಕಳೆಯಲೆಂದು ಜೆಡಿಎಸ್ ಕಾರ್ಯಾಗಾರ ಮಾಡಿಲ್ಲ, ರಾಜ್ಯದ ತೆರಿಗೆ ಹಣ ಹೇಗೆ ಲೂಟಿಯಾಗುತ್ತಿದೆ ? ಕಮಿಷನ್ ಸರ್ಕಾರವನ್ನು ಹೇಗೆ ತೆಗೆಯಬೇಕು ? ಎಂಬ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜೆಡಿಎಸ್ ಕಾರ್ಯಾಗಾರ ನಡೆಸಿದ್ದೇವೆ. ಪಂಚರತ್ನ ಯೋಜನೆ ಜಾರಿಯಾದರೆ ಕೇಂದ್ರದ ಬಳಿ ಅಂಗಲಾಚುವುದು ನಿಲ್ಲುತ್ತೆ ಎಂಬುದನ್ನು ಅರಿವು ಮೂಡಿಸಿದ್ದೇವೆ ಎಂದು ಹೇಳಿದರು.