ಬೆಂಗಳೂರು: ಮುಖ್ಯಮಂತ್ರಿಯಾಗುವ ಆಸೆ ಯಾರಿಗಿಲ್ಲ…ಪ್ರತಿಯೊಬ್ಬ ಶಾಸಕನಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತೆ. ನನಗೂ ಸಿಎಂ ಆಗಬೆಕು ಎಂಬ ಆಸೆಯಿದೆ. ಅದೃಷ್ಟ ಇದ್ದವರು ಮುಖ್ಯಮಂತ್ರಿಯಾಗ್ತಾರೆ ಎಂದು ಹೇಳುವ ಮೂಲಕ ಸಚಿವ ಆರ್.ಅಶೋಕ್ ಸಿಎಂ ಸ್ಥಾನದ ಆಕಾಂಕ್ಷೆಯನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ.
ಕೆಐಎಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ನೂತನ ಮುಖ್ಯಮಂತ್ರಿ ಬಗ್ಗೆ ಚರ್ಚಿಸಿ ಹೈಕಮಾಂಡ್ ಗೆ ಮಾಹಿತಿ ರವಾನಿಸಲಾಗುತ್ತದೆ. ಬಳಿಕ ಬಿಜೆಪಿ ಸಂಸದೀಯ ಮಂಡಳಿಯೇ ಸಿಎಂ ಯಾರೆಂದು ಘೋಷಣೆ ಮಾಡಲಿದೆ ಎಂದರು.
ಕೋವಿಡ್ ಪಾಸಿಟಿವ್ ತಾಯಂದಿರು ಮಾಸ್ಕ್ ಧರಿಸಿ ಮಕ್ಕಳಿಗೆ ಹಾಲುಣಿಸಲು ವೈದ್ಯರ ಸಲಹೆ
ಸಿಎಂ ಆಗುವ ಆಸೆ ನನಗೂ ಇದೆ. ಪಕ್ಷ, ದೇವರ ಆಶಿರ್ವಾದ ಇದ್ದವರು, ಅದೃಷ್ಟ ಇದ್ದವರು ಸಿಎಂ ಆಗ್ತಾರೆ. ಪಕ್ಷದ ಕಾರ್ಯಕರ್ತನಿಗೂ ಸಿಎಂ ಸ್ಥಾನ ಸಿಕ್ಕರೂ ಸಿಗಬಹುದು ಎಂದು ಹೇಳಿದ್ದಾರೆ.