ಬೆಂಗಳೂರು: ಭೀಕರ ರಸ್ತೆ ಅಪಘಾತದಿಂದ ಗಂಭೀರ ಸ್ಥಿತಿ ತಲುಪಿರುವ ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಬದುಕುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಅವರ ಅಂಗಾಂಗಗಳನ್ನಾದರೂ ದಾನ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ಸಹೋದರ ಸಿದ್ದೇಶ್ ತಿಳಿಸಿದ್ದಾರೆ.
250 ಮಿಲಿಯನ್ ವೀಕ್ಷಣೆ ಸಮೀಪದಲ್ಲಿ ‘ಪೊಗರು’ ಚಿತ್ರದ ಖರಾಬು ಹಾಡು
ಅಪೋಲೋ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದೇಶ್, ಇಂಥದ್ದೊಂದು ಸ್ಥಿತಿ ಬರಬಹುದು ಎಂಬುದನ್ನು ಊಹಿಸಲೂ ಇಲ್ಲ. ವಿಷಯ ಹೇಳಲೂ ಸಂಕಟವಾಗುತ್ತಿದೆ. ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯವಾಗುತ್ತಿದೆ. ಹೀಗೆ ಇದ್ದರೆ ಬದುವುದು ಕಷ್ಟ ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ. ಇನ್ನು 8-12 ಗಂಟೆಯಲ್ಲಿ ಸಂಚಾರಿ ವಿಜಯ್ ಅವರದ್ದು ನಾರ್ಮಲ್ ಡೆತ್ ಎಂದು ಘೋಷಿಸಿದರೆ ಅವರ ಅಂಗಾಂಗವನ್ನೂ ದಾನ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರ ಅಂಗಾಂಗವನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ.
ಈ ಸೀಸನ್ ನಲ್ಲಿ ಮಾವು ತಿಂದಿರಾ…? ಹಾಗಾದ್ರೆ ಇದನ್ನೋದಿ
ವಿಜಯ್ ಅವರ ಹೃದಯ ಸಮಾಜಕ್ಕಾಗಿಯೇ ಸದಾ ಮಿಡಿಯುತ್ತಿತ್ತು. ಸಮಾಜ ಮುಖಿಕಾರ್ಯದಲ್ಲಿ ಯಾವತ್ತೂ ಮುಂದಿದ್ದರು. ಅತಿವೃಷ್ಟಿ, ಅನಾವೃಷ್ಟಿ ಸಂದರ್ಭ ಎದುರಾದಾಗಲೂ ದೂರದೂರುಗಳಿಗೆ ತೆರಳಿ ಜನರಿಗೆ ಸಹಾಯ ಮಾಡಿದ್ದಾರೆ. ಕೋವಿಡ್ ನಂತಾ ಕಷ್ಟದ ಸಂದರ್ಭದಲ್ಲೂ ಜನರ ನೋವಿಗೆ ಸ್ಪಂದಿಸಿ ನೆರವು ನೀಡಿದ್ದಾರೆ. ತಾನೊಬ್ಬ ಸಿನಿಮಾ ನಟ, ರಾಜ್ಯ, ರಾಷ್ಟ್ರ ಪ್ರಶಸ್ತಿ ಇದೆಲ್ಲವನ್ನೂ ಬದಿಗಿಟ್ಟು ಸಮಾಜದಲ್ಲಿ ಎಲ್ಲರೊಂದಿಗೂ ಬೆರೆತು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದರು. ಹೀಗಾಗಿ ಅವರ ಅಂಗಾಂಗಗಳನ್ನು ದಾನ ಮಾಡಲು ತೀರ್ಮಾನಿಸಿದ್ದೇವೆ. ಇದರಿಂದ ಕೊನೇ ಪಕ್ಷ ಅವರು ಎಲ್ಲೋ ನಮ್ಮ ಜೊತೆ ಇದ್ದಾರೆ ಎಂಬ ಭಾವನೆ ನಮ್ಮಲ್ಲಿ ಸದಾ ಇರುತ್ತೆ ಎಂದು ಹೇಳಿದ್ದಾರೆ.