ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದೆಹಲಿ ಪಟಿಯಾಲಾ ನ್ಯಾಯಾಲಯ ವಿಕ್ರಾಂತ್ ರೋಣ ಬೆಡಗಿಗೆ ಸಮನ್ಸ್ ಜಾರಿ ಮಾಡಿದೆ.
ಜಾಕ್ವೆಲಿನ್ ಗೆಳೆಯ ಸುಕೇಶ್ ಚಂದ್ರಶೇಖರ್ 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಕೇಳಿಬಂದಿತ್ತು. ಸುಕೇಶ್ ನಿಂದ ದುಬಾರಿ ಕಾರು, ಕುದುರೆ, ಬೆಕ್ಕು, ಡೈಮಂಡ್ ನೆಕ್ಲೆಸ್, ಬ್ಯಾಗ್ ಸೇರಿದಂತೆ ಭಾರಿ ಮೊತ್ತದ ಉಡುಗೊರೆಯನ್ನು ಪಡೆದುಕೊಂಡಿದ್ದ ಜಾಕ್ವೆಲಿನ್ ಅವರನ್ನು ವಿಚಾರಣೆಗೊಳಪಡಿಸಿದ್ದ ಇಡಿ, ಚಾರ್ಜ್ ಶೀಟ್ ನಲ್ಲಿಯೂ ಹೆಸರು ದಾಖಲಿಸಿತ್ತು.
ಇದರ ಬೆನ್ನಲ್ಲೇ ಇದೀಗ ದೆಹಲಿಯ ಪಟಿಯಾಲ ಕೋರ್ಟ್ ಜಾಕ್ವೆಲಿನ್ ಗೆ ಸಮನ್ಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 26ರಂದು ಕೋರ್ಟಿಗೆ ಹಾಜರಾಗುವಂತೆ ಸೂಚಿಸಿದೆ.