ವೀಕ್ಷಕರಿಗೆ ತಪ್ಪಾದ ಮಾಹಿತಿ ಕೊಡುತ್ತ ಭಾರತ ವಿರೋಧಿ ವಿಷಯವನ್ನು ಪ್ರಕಟಿಸುತ್ತಿರುವ ಆರೋಪದ ಮೇಲೆ ಏಳು ಭಾರತೀಯ ಮತ್ತು ಪಾಕಿಸ್ತಾನ ಮೂಲದ ಒಂದು ಯೂಟ್ಯೂಬ್ ಚಾನೆಲ್ ಅನ್ನು ಭಾರತ ಸರ್ಕಾರ ನಿರ್ಬಂಧಿಸಿದೆ. ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಒಟ್ಟು 8 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದೆ. 2021ರ ಐಟಿ ನಿಯಮಗಳ ಅಡಿಯಲ್ಲಿ 7 ಭಾರತೀಯ ಮತ್ತು 1 ಪಾಕಿಸ್ತಾನ ಮೂಲದ YouTube ಚಾನಲ್‌ಗಳಿಗೆ ಬ್ರೇಕ್ ಹಾಕಲಾಗಿದೆ. ನಿರ್ಬಂಧಿತ ಯೂಟ್ಯೂಬ್ ಚಾನೆಲ್‌ಗಳು 114 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದವು. ಈ ಚಾನೆಲ್‌ಗಳಿಗೆ ಒಟ್ಟು 85. 73 ಲಕ್ಷ ಚಂದಾದಾರರಿದ್ದಾರೆ. ಭಾರತದ ಬಗ್ಗೆ ತಪ್ಪಾದ ಮಾಹಿತಿಯ ಜೊತೆಗೆ ದೇಶ ವಿರೋಧಿ ವಿಚಾರಗಳನ್ನು ಪ್ರಸಾರ ಮಾಡಿ ಈ ಯುಟ್ಯೂಬ್ ಚಾನೆಲ್‌ಗಳು ಹಣ ಗಳಿಸುತ್ತಿದ್ದವು.