ಬೆಂಗಳೂರು: ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತ ದಂಪತಿ ಪಂಜಾಬ್ ಮೂಲದವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ಎಂಎ, ಎಂಬಿಎ, ಬಿಬಿಎ ಸೇರಿ ಹಲವು ಪದವಿಗಳ ನಕಲಿ ಮಾರ್ಕ್ಸ್ ಕಾರ್ಡ್ ಗಳನ್ನು ನೀಡುತ್ತಿದ್ದರು. ಒಂದು ಪದವಿ ಮಾರ್ಕ್ಸ್ ಕಾರ್ಡ್ ಗೆ 60-70 ಸಾವಿರ ರೂಪಾಯಿ ಪಡೆಯುತ್ತಿದ್ದರು.
’ಅಂದಾಜ಼್ ಅಪ್ನಾ ಅಪ್ನಾ’ ಚಿತ್ರದ ಸೀನ್ ಅಣಕು ನಟನೆ ಮಾಡಿದ ಕ್ರಿಕೆಟರ್ಸ್
ರವೀಂದ್ರನಾಥ್ ಟ್ಯಾಗೋರ್ ವಿಶ್ವವಿದ್ಯಾಲಯ, ಅಸೆಟ್ ವಿವಿ, ಸಿ.ವಿ. ರಾಮನ್ ವಿವಿಗಳಿಗೆ ಸೇರಿದ ಮಾರ್ಕ್ಸ್ ಕಾರ್ಡ್ ಗಳನ್ನು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.