alex Certify BIG NEWS: ನಕಲಿ ನೋಟು ಹಾವಳಿ; ಬ್ಯಾಂಕ್ ಮ್ಯಾನೇಜರ್ ಗಳನ್ನೇ ಆರೋಪಿ ಮಾಡಿದ RBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಕಲಿ ನೋಟು ಹಾವಳಿ; ಬ್ಯಾಂಕ್ ಮ್ಯಾನೇಜರ್ ಗಳನ್ನೇ ಆರೋಪಿ ಮಾಡಿದ RBI

ಬೆಂಗಳೂರು: ರಾಜ್ಯದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚುತ್ತಿದ್ದು, ಬೆಂಗಳೂರು, ಹುಬ್ಬಳ್ಳಿ, ಉಡುಪಿ, ಮಣಿಪಾಲ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಕಲಿ ನೋಟುಗಳ ಕಾರುಬಾರು ನಡೆದಿದೆ.

ನಕಲಿ ನೋಟುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಬಿ ಐ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಗಳ ವಿರುದ್ಧ ದೂರು ದಾಖಲಿಸಿದೆ.

100 ರೂಪಾಯಿ ಮುಖ ಬೆಲೆಯ ಒಟ್ಟು 30 ನೋಟುಗಳು ಪತ್ತೆಯಾಗಿದ್ದು, ಎರಡು ದಿನಗಳಲ್ಲಿ 4 ಎಫ್ ಐ ಆರ್ ದಾಖಲಾಗಿದೆ. ಹುಬ್ಬಳ್ಳಿ, ಉಡುಪಿ, ಮಣಿಪಾಲ್, ಬೆಂಗಳೂರಿನ ಮಲ್ಲೇಶ್ವರಂ ಬ್ಯಾಂಕ್ ನ ಬ್ರ್ಯಾಂಚ್ ಗಳಲ್ಲಿ ಆರ್ ಬಿ ಐ ರಿಮೀಟ್ ಮಾಡುವಾಗ ನಕಲಿ ನೋಟುಗಳು ಪತ್ತೆಯಾಗಿವೆ.

ಈ ಹಿನ್ನೆಲೆಯಲ್ಲಿ ಆರ್ ಬಿ ಐ ಮ್ಯಾನೇಜರ್ ಆನಂದ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಯುಬಿಐ ಬ್ಯಾಂಕ್ ಮ್ಯಾನೇಜರ್ ಗಳ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಕಲಿ ನೋಟುಗಳ ಜಾಲದ ಹಿಂದಿರುವವರ ಬಗ್ಗೆ ಪೊಲಿಸರು ತನಿಖೆ ಚುರುಕುಗೊಳಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...