ಬೆಂಗಳೂರು; ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಘಟಕ ತೀವ್ರವಾಗಿ ಖಂಡಿಸಿದೆ.
ಉದಯಪುರದಲ್ಲಿ ನಡೆದ ಭೀಕರ ಹತ್ಯೆ ಅತ್ಯಂತ ಆಘಾತಕಾರಿ. ಧರ್ಮದ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನ ಸಹಿಸಲು ಸಾಧ್ಯವಿಲ್ಲ. ಕ್ರೌರ್ಯದ ಮೂಲಕ ಆತಂಕ ಸೃಷ್ಟಿಸುತ್ತಿರುವವರಿಗೆ ತಕ್ಷಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.
ನಾವೆಲ್ಲರೂ ಒಟ್ಟಾಗಿ ದ್ವೇಷವನ್ನು ಸೋಲಿಸಬೇಕು. ಎಲ್ಲರಲ್ಲೂ ಮನವಿ ಮಾಡುತ್ತೇವೆ, ದಯವಿಟ್ಟು ಶಾಂತಿ, ಸಹೋದರತ್ವವನ್ನು ಕಾಪಾಡಿಕೊಳ್ಳಿ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ತಿಳಿಸಿದೆ.