ಬೆಂಗಳೂರು: ಕಾವಿ ಹಾಕುವ ಕಳ್ಳ ಶ್ರೀಗಳ ಮುಖಕ್ಕೆ ಉಗಿಬೇಕು ಎಂದು ಸ್ವಾಮೀಜಿಗಳ ವಿರುದ್ಧ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಕಿಡಿಕಾರಿದ್ದಾರೆ.
ಸಾವಿರಾರು ವರ್ಷಗಳಿಂದ ನಾವು ಒಂದಾಗಿ ಬದುಕುತ್ತಿದ್ದೇವೆ. ಕೆಲ ಶ್ರೀಗಳು ಧರ್ಮದ ನಡುವೆ ವೈಮನಸ್ಸು ಬೆಳೆಸುತ್ತಿದ್ದಾರೆ. ಒಬ್ಬ ಡ್ರೈವರ್ ಕರೆದುಕೊಂಡು ಹೋಗಬೇಡಿ ಅಂತಾರೆ. ಇನ್ನೊಬ್ಬ ಸ್ವಾಮೀಜಿ ಹಿಜಾಬ್ ಬಗ್ಗೆ ಮಾತನಾಡುತ್ತಾನೆ. ಮುಸ್ಲಿಂರು ಮಾಡಿದ ವಿಗ್ರಹಕ್ಕೆ ಪೂಜಿಸಬೇಡಿ ಎನ್ನುತ್ತಾನೆ ಧರ್ಮದ ನಡುವೆ ವಿಷ ಬೀಜ ಬಿತ್ತುತ್ತಿರುವ ಕಳ್ಳ ಸ್ವಾಮೀಜಿಗಳನ್ನು ದೂರವಿಡಬೇಕು ಎಂದು ಗುಡುಗಿದ್ದಾರೆ.
ಕಿರುತೆರೆಯಲ್ಲಿ ಪ್ರಸಾರವಾಗಲಿದೆ ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’
ನಮ್ಮೂರಲ್ಲಿ 90% ದೇವಸ್ಥಾನ ಕಟ್ಟಿದವರೇ ಮುಸ್ಲಿಂರು. ಯಾವನೋ ಸ್ವಾಮಿ ಹೇಳಿದ್ದಕ್ಕೆ ಈಗ ಪೂಜಿಸುತ್ತಿರುವ ವಿಗ್ರಹ ಕಿತ್ತು ಬಿಸಾಕಬೇಕಾ? ಸ್ವಾಮೀಜಿಗಳೆಂದು ಹೇಳಿಕೊಂಡು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.