ಮೈಸೂರು: ಹಿಜಾಬ್ ವಿವಾದ ರಾಜಕೀಯ ನಾಯಕರ ವಾಕ್ಸಮರಕ್ಕೆ ಕಾರಣವಾಗಿದ್ದು, ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುವುದಲ್ಲ, ಮೊದಲು ಧಮ್ ಇದ್ದರೆ ಮುಸ್ಲೀಂ ಮಹಿಳೆಯರಿಗೆ ಮಸೀದಿಗೆ ಪ್ರವೇಶ ಕೊಡಿಸಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಕಾಂಗ್ರೆಸ್ ಶಾಸಕಿ ಖನೀಜಾ ಫಾತೀಮಾ ವಿಧಾನಸೌಧ ಅಧಿವೇಶನಕ್ಕೆ ಹಿಜಾಬ್ ಧರಿಸಿ ಬರುತ್ತೇನೆ. ಧೈರ್ಯವಿದ್ದರೆ ತಡೆಯಲಿ ಎಂದು ಹೇಳಿದ್ದಾರೆ. ಇವರು ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುವುದಲ್ಲ, ಮೊದಲು ಮಸೀದಿಗೆ ಹೋಗಲಿ. ಮುಸ್ಲೀಂ ಮಹಿಳೆಯರಿಗೆ ಹಲವೆಡೆಗಳಲ್ಲಿ ಮಸೀದಿಗೆ ಪ್ರವೇಶ ನೀಡುವುದಿಲ್ಲ. ಕಾಂಗ್ರೆಸ್ ಶಾಸಕಿಯವರು ಮೊದಲು ಮಸೀದಿಗೆ ಮಹಿಳೆಯರಿಗೆ ಪ್ರವೇಶ ಕೊಡಿಸಲಿ ಎಂದು ತಿರುಗೇಟು ನೀಡಿದರು.
BREAKING NEWS: ‘ಮಹಾಭಾರತ’ದ ಭೀಮ ಪ್ರವೀಣ್ ಕುಮಾರ್ ಸೋಬ್ತಿ ವಿಧಿವಶ
ಇದೇ ವೇಳೆ ಎಂಎಲ್ ಸಿ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆಗೆ ಕಿಡಿಕಾರಿರುವ ಈಶ್ವರಪ್ಪ, ಸಿ.ಎಂ.ಇಬ್ರಾಹಿಂ ಹೇಳಿಕೆಯಿಂದ ಮುಸ್ಲೀಂ ಮಹಿಳೆಯರಿಗೆ ಅವಮಾನ ಮಾಡಿದಂತಾಗಿದೆ. ಇವರ ಮುಖ ನೋಡಲು ಹಿಜಾಬ್ ತೆಗೆಯಬೇಕಾ? ಇಬ್ರಾಹಿಂ ಹೇಳಿಕೆಯನ್ನು ಯಾರೂ ಒಪ್ಪುವಂತದ್ದಲ್ಲ ಎಂದು ಹೇಳಿದರು.