alex Certify BIG NEWS: ದ. ಆಫ್ರಿಕಾದಲ್ಲಿ ಓಮಿಕ್ರಾನ್​​ ನ ಎರಡು ಹೊಸ ರೂಪಾಂತರಗಳು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದ. ಆಫ್ರಿಕಾದಲ್ಲಿ ಓಮಿಕ್ರಾನ್​​ ನ ಎರಡು ಹೊಸ ರೂಪಾಂತರಗಳು ಪತ್ತೆ

ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಕೊರೊನಾ ವೈರಸ್​ನ ಓಮಿಕ್ರಾನ್​ ರೂಪಾಂತರದ ಎರಡು ಹೊಸ ಉಪ ವರ್ಗಗಳನ್ನು ಕಂಡು ಹಿಡಿದಿದ್ದಾರೆ ಎಂದು ದೇಶದಲ್ಲಿ ಜೀನ್​​ ಸಿಕ್ವೇನ್ಸಿಂಗ್​ ಸಂಸ್ಥೆಗಳನ್ನು ನಡೆಸುತ್ತಿರುವ ತಲಿಯೊ ಡಿ ಒಲಿವೇರಾ ಮಾಹಿತಿ ನೀಡಿದ್ದಾರೆ.

ಈ ವಂಶಾವಳಿಗಳಿಗೆ BA.4 ಮತ್ತು BA.5 ಎಂದು ಹೆಸರಿಸಲಾಗಿದೆ ಎಂದು ಸರಣಿ ಟ್ವೀಟ್​ಗಳ ಮೂಲಕ ತುಲಿಯೊ ಡಿ ಒಲಿವೇರಾ ಮಾಹಿತಿ ನೀಡಿದ್ದಾರೆ. ಈ ವಂಶಾವಳಿಗಳು ದಕ್ಷಿಣ ಆಫ್ರಿಕಾದಲ್ಲಿ ಸೋಂಕನ್ನು ಹೆಚ್ಚಳಗೊಳಿಸಿಲ್ಲ ಎಂದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಅತಿ ಕಡಿಮೆ ಸೋಂಕುಗಳು, ಹಾಗೂ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವವರ ಪ್ರಮಾಣದಲ್ಲಿ ಇಳಿಕೆ ಮತ್ತು ಸಾವಿನ ಸಂಖ್ಯೆಗಳನ್ನು ಗಮನಿಸಿದರೆ ಮುಂದುವರಿದ ಕೊರೊನಾ ರೂಪಾಂತರದ ಬಗ್ಗೆ ಎಚ್ಚರಿಕೆ ವಹಿಸಬೇಕೆ ಹೊರತು ಆತಂಕ ಪಡುವ ಅಗತ್ಯವಿಲ್ಲ ಎಂದು ಡಿ. ಒಲಿವೇರಾ ಹೇಳಿದ್ದಾರೆ.

ನವೆಂಬರ್​​ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬೋಟ್ಸ್​ವಾನಾದಲ್ಲಿ ಮೊದಲ ಬಾರಿಗೆ ಓಮಿಕ್ರಾನ್​ ಸೋಂಕು ಪತ್ತೆಯಾಗಿತ್ತು. ದಕ್ಷಿಣ ಆಫ್ರಿಕಾವು ಓಮಿಕ್ರಾನ್​​​ ಸೋಂಕಿನ ಅಲೆಯನ್ನು ಕಂಡ ಮೊದಲ ದೇಶವಾಗಿದೆ. ಆಸ್ಪತ್ರೆಗಳು ಹಾಗೂ ಸಾವಿನ ಸಂಖ್ಯೆಗಳಿಗೆ ಡೆಲ್ಟಾ ರೂಪಾಂತರಿಯು ಕಾರಣವಾಗಿದ್ದರೆ ಡಿಸೆಂಬರ್​ ತಿಂಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ದೈನಂದಿನ ಪ್ರಕರಣಗಳು ವರದಿಯಾಗಲು ಓಮಿಕ್ರಾನ್​ ರೂಪಾಂತರಿ ಕಾರಣವಾಗಿದೆ.

ಬೋಟ್ಸ್ವಾನಾ, ಬೆಲ್ಜಿಯಂ, ಜರ್ಮನಿ, ಡೆನ್ಮಾರ್ಕ್ ಮತ್ತು ಯುಕೆ ಮಾದರಿಗಳಲ್ಲಿಯೂ ಉಪವರ್ಗಗಳು ಕಂಡುಬಂದಿವೆ ಎಂದು ಡಿ ಒಲಿವೇರಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಎರಡು ವಂಶಾವಳಿಗಳು ಒಂದೇ ರೀತಿಯ ಸ್ಪೈಕ್​ ಪ್ರೋಟೀನ್​ ಹಾಗೂ ರೂಪಾಂತರಗಳನ್ನು ಹೊಂದಿದೆ. ಇದು ಮೂಲ ಓಮಿಕ್ರಾನ್ ಸ್ಟ್ರೈನ್‌ಗಿಂತ ಹೆಚ್ಚು ಸಾಂಕ್ರಾಮಿಕವಾಗಿ ಕಂಡುಬರುವ BA.2 ಉಪವರ್ಗಕ್ಕೆ ಸೇರಿದೆ. ಅವುಗಳು ಕೆಲವು ಹೆಚ್ಚುವರಿ ರೂಪಾಂತರಗಳನ್ನು ಹೊಂದಿವೆ ಎಂದು ಹೇಳಿದರು.

ಸ್ಪೈಕ್ ಪ್ರೊಟೀನ್‌ನ ಹೊರಗಿನ ಅಮೈನೊ ಆಸಿಡ್ ರೂಪಾಂತರಗಳ ವಿಷಯದಲ್ಲಿ ಎರಡು ಉಪವರ್ಗಗಳು ಪರಸ್ಪರ ಭಿನ್ನವಾಗಿರುತ್ತವೆ ಎಂದು ಅವರು ಹೇಳಿದರು. ಬೋಟ್ಸ್ವಾನಾ ಕೂಡ ರೂಪಾಂತರಗಳ ಆವಿಷ್ಕಾರವನ್ನು ಘೋಷಿಸಿದೆ. ದಕ್ಷಿಣ ಆಫ್ರಿಕಾ ಸೋಮವಾರ 553 ಹೊಸ ಕರೋನ ವೈರಸ್ ಪ್ರಕರಣಗಳನ್ನು ವರದಿ ಮಾಡಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...