ಬೆಂಗಳೂರು: ದೈವ ನರ್ತಕರಿಗೆ ರಾಜ್ಯ ಸರ್ಕಾರ ಮಾಸಾಶನ ಘೋಷಣೆ ಮಾಡಿರುವ ಕ್ರಮವನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ವಿರೋಧಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರೋ ನೋವಿನಿಂದ ಕೂಗಿದವರನ್ನು ದೇವರು ಎಂದರು. ಈಗಿರುವ ಎಲ್ಲಾ ದೇವರು ಮನುಷ್ಯರೇ. ಈ ಸುಳ್ಳು ಸತ್ಯವನ್ನು ಜನರ ಮುಂದೆ ಇಡುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ದೈವ ನರ್ತಕರಿಗೆ 2 ಸಾವಿರ ಮಾಸಾಶನ ನೀಡುವ ಬದಲು ಉದ್ಯೋಗ ನೀಡಿ. ಮಾನವ ಶ್ರಮವನ್ನು ಬಳಸಿಕೊಳ್ಳಿ. ಅದನ್ನು ಬಿಟ್ಟು ನಾನು ದೇವರು ಎಂದು ಕುಣಿದಾಗ ಅದಕ್ಕೆ 2 ಸಾವಿರ ರೂಪಾಯಿ ಕೊಟ್ಟರೆ ಅದು ಸಾಲಲ್ಲ. ಮುಂದೆ ಆತ ಮೌಢ್ಯವನ್ನು ಬಿತ್ತುತ್ತಾನೆ. ಸಾರ್ವಜನಿಕರ ಹಣವನ್ನು ಪೋಲು ಮಾಡಬಾರದು, ಅರ್ಚಕರು, ಮೌಲ್ವಿಗಳಿಗೂ ಮಾಸಾಶನ ನೀಡಬಾರದು. ದೇವಸ್ಥಾನಗಳಲ್ಲಿ ನಮಗೆ ಜ್ಞಾನ ಸಿಗಲ್ಲ. ಗ್ರಂಥಾಲಯ, ಶಾಲೆಗಳಲ್ಲಿ ಮಾತ್ರ ಜ್ಞಾನ ಸಿಗುತ್ತೆ. ದೇವಸ್ಥಾನಗಳಲ್ಲಿ ನೀಡುವ ತೀರ್ಥವನ್ನೂ ಕುಡಿಯಬಾರದು. ಅವೆಲ್ಲ ಅವೈಜ್ಞಾನಿಕವಾದದ್ದು. ಅವರು ಶುದ್ಧವಾಗಿ ಕೈತೊಳೆಯಲ್ಲ ಎಂದು ತಿಳಿಸಿದ್ದಾರೆ.