alex Certify BIG NEWS: ದೇಶದ ಮೊಟ್ಟ ಮೊದಲ ʼಡ್ರೋನ್ʼ ಶಾಲೆ ಲೋಕಾರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದ ಮೊಟ್ಟ ಮೊದಲ ʼಡ್ರೋನ್ʼ ಶಾಲೆ ಲೋಕಾರ್ಪಣೆ

ದೇಶದಲ್ಲಿ ಮೊಟ್ಟ ಮೊದಲ ಡ್ರೋನ್​ ಶಾಲೆಯು ಆರಂಭಗೊಂಡಿದೆ. ಮಾರ್ಚ್​ 10ರಂದು ಗ್ವಾಲಿಯರ್​ನಲ್ಲಿ ಈ ಹೊಸ ಸಂಸ್ಥೆಯು ಆರಂಭಗೊಂಡಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಬಹುದೆಂದು ನಿರೀಕ್ಷಿಸಲಾಗಿದೆ.

ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​​ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಈ ಡ್ರೋನ್​ ಶಾಲೆಯನ್ನು ಲೋಕಾರ್ಪಣೆಗೊಳಿಸಿದರು.

ಈ ಹೊಸ ಪ್ರಯತ್ನದ ಬಗ್ಗೆ ಇಬ್ಬರೂ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ರೀತಿಯ ತಂತ್ರಜ್ಞಾನವು ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲಿದೆ ಎಂದು ಹೇಳಿದರು. ‘

ಈ ವಿಚಾರವಾಗಿ ಮಾತನಾಡಿದ ಸಿಎಂ ಚೌಹಾಣ್, ಡ್ರೋನ್ ತಂತ್ರಜ್ಞಾನವು ಯುವಕರಿಗೆ ವಿಶೇಷವಾಗಿ ಕಲಿಕೆಗೆ ಹೊಸ ಮಾರ್ಗಗಳು ಮತ್ತು ಅವಕಾಶಗಳನ್ನು ತೆರೆಯುತ್ತದೆ. ರಾಜ್ಯದ ಮೊದಲ ಡ್ರೋನ್ ಶಾಲೆಯನ್ನು ಗ್ವಾಲಿಯರ್‌ನಲ್ಲಿ ಉದ್ಘಾಟಿಸಲಾಗಿದೆ. ಈ ಉದ್ಯಮದಲ್ಲಿ ಡ್ರೋನ್‌ಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾದ್ದರಿಂದ ದೊಡ್ಡ ಉದ್ಯೋಗಾವಕಾಶವಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...