ಬೆಂಗಳೂರು; ದೇವಾಲಯಗಳನ್ನು ಹಸ್ತಾಂತರ ಮಾಡಲು ಹೊರಟಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕ್ರಮವನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಇದು ದೇವಸ್ಥಾನದ ಹಣವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡುವ ಕುತಂತ್ರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರು ತಮಗಿಷ್ಟವಾದ ಕಾನೂನುಗಳನ್ನು ಜಾರಿಗೆ ತರುತ್ತಿದ್ದಾರೆ. ಮುಜರಾಯಿ ಇಲಾಖೆಯಲ್ಲಿ ಐಎ ಎಸ್, ಕೆ ಎ ಎಸ್ ಅಧಿಕಾರಿಗಳು ಇದ್ದಾರೆ. ದೇವಸ್ಥಾನಗಳಲ್ಲಿ ಕೋಟ್ಯಂತರ ರೂಪಾಯಿ ಹಣವಿದೆ. ಅದನ್ನು ತಮ್ಮ ಕಾರ್ಯಕರ್ತರಿಗೆ ನೀಡಲು ಸರ್ಕಾರ ಮುಂದಾಗಿದೆ. ನಾವು ಕೂಡ ಹಿಂದುಗಳೇ. ನಮಗೂ ಸಂಸ್ಕೃತಿ ಇದೆ. ಜನರ ಕಲ್ಯಾಣಕ್ಕೆ ಬೇಕಾದ ಕಾನೂನುನನ್ನು ಬಿಜೆಪಿಯವರು ತರುತ್ತಿಲ್ಲ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ, ದೇವಸ್ಥಾನಗಳ ಹಸ್ತಾಂತರ ಕಾನೂನು ತರುವ ಮೂಲಕ ತಮ್ಮಿಷ್ಟದ ಪ್ರಕಾರ ನಡೆದುಕೊಳ್ಳುತ್ತಿದ್ದಾರೆ. ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಹೊಸ ವರ್ಷ ಈ ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ
ಬಿಜೆಪಿ ನಾಯಕರು ಹಿಂದೂ ವಿರೋಧಿಗಳು. ದೇವಾಲಯಗಳನ್ನು ಹಸ್ತಾಂತರ ಮಾಡಲು ಹೊರಡುವ ಮೂಲಕ ಇವರೆಂತಹ ಕಠಿಣ ಹೃದಯಿಗಳು ಎಂಬುದನ್ನು ತೋರುತ್ತಿದ್ದಾರೆ. ದೇವಾಲಯಕ್ಕೆ ಕೈ ಹಾಕಿದರೆ ಸುಟ್ಟು ಹೋಗ್ತಾರೆ. ಜನವರಿ 4ರಂದು ನಡೆಯಲಿರುವ ಹಿರಿಯರ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಸುವುದಾಗಿ ತಿಳಿಸಿದರು.