ಬೆಂಗಳೂರು: ಇಂದು ಇಡೀ ರಾಜ್ಯದಲ್ಲಿ ದೇವಾಲಯಗಳ ತೆರವು ಭೀತಿ ಎದುರಾಗಿದೆ. ಬಿಜೆಪಿ ಸರ್ಕಾರ ಇರೋ ಸಂದರ್ಭದಲ್ಲಿ ದೇವಾಲಯ ಒಡೆದಿದ್ದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಈಶ್ವರಪ್ಪ, ಜಿಲ್ಲಾಧಿಕಾರಿ ದೇವಸ್ಥಾನ ಒಡೆದು ಹಾಕಿದ್ದು ತಪ್ಪೆ. ಸುಪ್ರೀಂ ಕೋರ್ಟ್ ನ ಆದೇಶಗಳು ಬೇಕಾದಷ್ಟಿವೆ. ಎಷ್ಟೇ ದೇವಸ್ಥಾನಗಳನ್ನು ಪಟ್ಟಿ ಮಾಡಿರಲಿ, ರಾಜ್ಯದಲ್ಲಿ ಯಾವುದೇ ದೇವಾಲಯಗಳನ್ನು ಒಡೆಯಬಾರದು ಎಂದು ಹೇಳಿದರು.
ರೌಡಿ ಶೀಟರ್ ಬರ್ಬರ ಹತ್ಯೆ; ನಾಲ್ವರು ಆರೋಪಿಗಳ ಬಂಧನ
ಯಾಕೆ ದೇವಾಲಯಗಳನ್ನು ಮಾತ್ರ ತೆರವು ಮಾಡುತ್ತಿದ್ದಾರೆ ಎನ್ನುವುದು ಕೂಡ ಪ್ರಶ್ನೆಯಾಗುತ್ತೆ. ಕಾಂಗ್ರೆಸ್ ನಾಯಕರು ಹೇಳಿದ್ದರಲ್ಲೂ ಯಾವುದೇ ತಪ್ಪಿಲ್ಲ. ಈಗಲಾದರೂ ಕೈ ನಾಯಕರಿಗೆ ದೇವಾಲಯಗಳನ್ನು ಉಳಿಸಬೇಕು ಎನಿಸಿದೆಯಲ್ಲ ಎಂದು ಹೇಳಿದ್ದಾರೆ.