ಮೈಸೂರು: ಇತ್ತೀಚಿನ ದಿನಗಳಲ್ಲಿ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಒಬ್ಬೊಬ್ಬರಾಗಿ ಜೆಡಿಎಸ್ ಗೆ ಗುಡ್ ಬೈ ಹೇಳುತ್ತಿದ್ದು, ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಜೆಡಿಎಸ್ ಎಂಎಲ್ ಸಿ ಸಂದೇಶ್ ನಾಗರಾಜ್ ತಾವು ಜೆಡಿಎಸ್ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ. 2-3 ದಿನಗಳಲ್ಲಿ ಜೆಡಿಎಸ್ ಗೆ ರಾಜೀನಾಮೆ ನೀಡುತ್ತಿದ್ದು, ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಂದೇಶ್ ನಾಗರಾಜ್, ಬಿಜೆಪಿ ಸೇರಿದ ಬಳಿಕ ಜೆಡಿಎಸ್ ತೊರೆಯಲು ಕಾರಣವೇನು ಎಂಬುದನ್ನು ತಿಳಿಸುತ್ತೇನೆ. ಹೆಚ್.ಡಿ.ಕುಮಾರಸ್ವಾಮಿಯವರಿಗೆ ಪಕ್ಷದಲ್ಲಿ ನನ್ನ ಅಗತ್ಯವಿಲ್ಲ ಅನಿಸುತ್ತಿದೆ. ನನ್ನ ಅಗತ್ಯವಿಲ್ಲದಿದ್ದಾಗ ಆ ಜಾಗದಲ್ಲಿ ನಾನು ಯಾಕೆ ಇರಬೇಕು ಎಂದು ಹೇಳುವ ಮೂಲಕ ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ವಿಶ್ವದ ವಿಶೇಷ ಮಗು ಇದು…! 147 ದಿನಕ್ಕೇ ಜನನ…!!
ಕಳೆದ ಮೂರು ವರ್ಷಗಳಿಂದ ಕೇವಲ ದೈಹಿಕವಾಗಿ ನಾನು ಜೆಡಿಎಸ್ ನಲ್ಲಿದ್ದೇನೆ. ಜೆಡಿಎಸ್ ನಾಯಕರ ಸಂಪರ್ಕದಲ್ಲಿಯೂ ಇಲ್ಲ. ವಿಧಾನಪರಿಷತ್ ಒಳಗೂ ನಾನು ಬಿಜೆಪಿ ಪರವಾಗಿಯೇ ಬಿಲ್ ಗಳಿಗೆ ಕೈ ಎತ್ತಿದ್ದೇನೆ. ಬಿಜೆಪಿಯಿಂದ ವಿಧಾನಪರಿಷತ್ ಟಿಕೆಟ್ ಸಿಗುವ ವಿಶ್ವಾಸ ಕೂಡ ಇದೆ. ಹಾಗಾಗಿ ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದೇನೆ ಎಂದು ಹೇಳಿದರು.