ಹುಬ್ಬಳ್ಳಿ: ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದು ಮುಖ್ಯ. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರು ಬೇಕಾದರೂ ಆಗಲಿ ಬೇಜಾರಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ದಲಿತರನ್ನಾದರೂ ಸಿಎಂ ಮಾಡಲಿ, ಅಲ್ಪಸಂಖ್ಯಾತರನ್ನಾದರೂ ಸಿಎಂ ಮಾಡಲಿ. ಯಾರನ್ನು ಸಿಎಂ ಮಾಡಬೇಕು ಎಂಬುದು ಹೈಕಮಾಂಡ್ ಹಾಗೂ ಶಾಸಕರಿಗೆ ಬಿಟ್ಟ ನಿರ್ಧಾರ ಎಂದರು.
ಕೆಫೆಯಲ್ಲಿ ಸಿಗುವ ಈ ಚಹಾದ ಬೆಲೆ ಕೇಳಿದ್ರೆ ದಂಗಾಗ್ತೀರಿ…..!
ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೆಚ್.ಡಿ.ಕೆ. ಹೇಳುತ್ತಿರುವುದು ಸುಳ್ಳು. ಕುಮಾರಸ್ವಾಮಿ ಮಾತಿಗೆ ಕಿಮ್ಮತ್ತು ಕೊಡಲ್ಲ. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ ಎಂದು ಆರೋಪಿಸಿದ್ದಾರೆ. ಯಡಿಯೂರಪ್ಪ ಆರ್.ಎಸ್.ಎಸ್ ನಿಂದ ಬಂದವರು, ಆರ್.ಎಸ್.ಎಸ್ ಗೂ ನಮಗೂ ತದ್ವಿರುದ್ಧ. ಇನ್ನು ಅಧಿಕಾರದಲ್ಲಿರೋರ ಮನೆ ಬಾಗಿಲಿಗೆ ನಾನೆಂದೂ ಹೋಗಲ್ಲ. ಅದು ನನ್ನ ಪ್ರಿನ್ಸಿಪಲ್. ಹಾಗಾಗಿ ಬಿ ಎಸ್ ವೈ ಸಿಎಂ ಆಗಿದ್ದಾಗ ನಾನು ಅವರನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.