alex Certify BIG NEWS: ದತ್ತಪೀಠ: 2ನೇ ಹಂತದ ಹೋರಾಟಕ್ಕೆ ಸಿದ್ಧತೆ; ಸಿ.ಟಿ.ರವಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದತ್ತಪೀಠ: 2ನೇ ಹಂತದ ಹೋರಾಟಕ್ಕೆ ಸಿದ್ಧತೆ; ಸಿ.ಟಿ.ರವಿ ಮಾಹಿತಿ

ಚಿಕ್ಕಮಗಳೂರು: ದತ್ತಪೀಠದ ಜಾಗದ ವಿಚಾರವಾಗಿ 2ನೇ ಹಂತದ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ದತ್ತಪೀಠವೇ ಬೇರೆ, ದರ್ಗಾವೇ ಬೇರೆ. ಎರಡನ್ನೂ ಒಂದು ಮಾಡಿದ್ದೇ ಸರಿಯಲ್ಲ. ಈ ಬಾರಿ ದತ್ತಜಯಂತಿಯಿಂದಲೇ ಐಡಿ ಪೀಠದಲ್ಲಿರುವುದು ದತ್ತಪೀಠ, ನಾಗೇನಹಳ್ಳಿಯಲ್ಲಿ ಇರುವುದು ಬಾಬಾಬುಡನ್ ದರ್ಗಾ. ಎರಡೂ ಪ್ರತ್ಯೇಕ ಜಾಗದಲ್ಲಿದೆ ಎಂಬ ಬಗ್ಗೆ 2ನೇ ಹಂತದ ಹೋರಾಟ ಸಿದ್ಧತೆ ನಡೆಸಲಾಗುವುದು ಎಂದರು.

ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್ ಗಿರಿಯ ದತ್ತಪೀಠದಲ್ಲಿ ಪೂಜೆಗಾಗಿ ರಾಜ್ಯ ಸರ್ಕಾರ ಇಬ್ಬರು ಅರ್ಚಕರ ನೇಮಕ ಮಾಡಿದೆ. ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರದ ಸಂದೀಪ್ ಅರ್ಚಕರಾಗಿ ನೇಮಕಗೊಂಡಿದ್ದಾರೆ. ಓರ್ವ ಮುಸ್ಲಿಂ ಸದಸ್ಯರನ್ನು ಒಳಗೊಂಡಿದ್ದ 8ಜನರ ಸದಸ್ಯರಿರುವ ಆಡಳಿತ ಮಂಡಳಿ ಇದೀಗ ಇಬ್ಬರು ಅರ್ಚಕರನ್ನು ನೇಮಕ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...