ನವದೆಹಲಿ: ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರ ತೆರಿಗೆ ಭಾರವನ್ನು ಇಳಿಸಿದ್ದು, ಹೊಸ ತೆರಿಗೆ ಪದ್ಧತಿಯಲ್ಲಿ 3 ಲಕ್ಷದವರೆಗೆ ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ವೈಯಕ್ತಿಕ ತೆರಿಗೆ ವಿಭಾಗದಲ್ಲಿ 3 ಲಕ್ಷ ಆದಾಯದವರೆಗೂ ತೆರಿಗೆ ಪಾವತಿ ಮಾಡಬೇಕಿಲ್ಲ ಎಂದು ಹೇಳಿದರು.
3ರಿಂದ 5 ಲಕ್ಷದವರೆಗೆ 5 ಪರ್ಸೆಂಟ್ ತೆರಿಗೆ, 6ರಿಂದ 9ಲಕ್ಷದವರೆಗೆ 10 ಪರ್ಸೆಂಟ್ ತೆರಿಗೆ, 9ರಿಂದ 12 ಲಕ್ಷದವರೆಗೆ 15 ಪರ್ಸೆಂಟ್ ತೆರಿಗೆ ಪಾವತಿಸಬೇಕು. ಇನ್ನು ಸೇವಾ ಸುಂಕವನ್ನು 37 ರಿಂದ 27 ಪರ್ಸೆಂಟ್ ಗೆ ಇಳಿಸಲಾಗಿದೆ ಎಂದರು.
ಇನ್ನು ಐಟಿ ರಿಟರ್ನ್ಸ್ ಗೆ ಹೊಸ ಫಾರ್ಮ್ ಜಾರಿಯಾಗಲಿದ್ದು, 16 ದಿನಗಳಲ್ಲಿ ಐಟಿ ರಿಟರ್ನ್ ಪಡೆಯಬಹುದು. ಅತಿಹೆಚ್ಚು ಡಿಜಿಟಲ್ ಪಾವತಿ ಮಾಡಿದರೆ ತೆರಿಗೆ ಕಡಿತವಾಗಲಿದೆ ಎಂದು ಹೇಳಿದರು.