alex Certify BIG NEWS: ತಿಂಗಳಿನಿಂದ ಉದ್ಯೋಗವಿಲ್ಲದಿರುವ ಚಂದಾದಾರರಿಗೆ EPFO ದಿಂದ ಮೇಜರ್‌ ರಿಲೀಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಿಂಗಳಿನಿಂದ ಉದ್ಯೋಗವಿಲ್ಲದಿರುವ ಚಂದಾದಾರರಿಗೆ EPFO ದಿಂದ ಮೇಜರ್‌ ರಿಲೀಫ್

ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಯಿಂದ ನಿರುದ್ಯೋಗಿಗಳಾಗಿರುವ ತನ್ನ ಚಂದಾದಾರರ ನೆರವಿಗೆ ಬಂದಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ), ಹಿಂದಿರಿಗಿಸದೇ ಇರಬಲ್ಲ ಮುಂಗಡವನ್ನು ತಂತಮ್ಮ ಖಾತೆಗಳಿಂದ ಹಿಂಪಡೆಯಲು ಅವಕಾಶ ಕೊಟ್ಟಿದೆ.

ಚಂದಾದಾರರು ತಮ್ಮ ಪಿಎಫ್ ಖಾತೆಗಳಲ್ಲಿರುವ ಒಟ್ಟಾರೆ ಮೊತ್ತದ 75%ರಷ್ಟನ್ನು ಮುಂಗಡದ ರೂಪದಲ್ಲಿ ಪಡೆಯಬಹುದಾಗಿದೆ ಎಂದು ತನ್ನ ಟ್ವಿಟರ್‌ ಹ್ಯಾಂಡಲ್ ಮೂಲಕ ಇಪಿಎಫ್‌ಓ ತಿಳಿಸಿದೆ. ಈ ಮೂಲಕ ತನ್ನ ಚಂದಾದಾರರಿಗೆ ಆರ್ಥಿಕ ನೆರವು ನೀಡಲು ಮುಂದಾಗಿರುವ ಇಪಿಎಫ್‌ಓ, ಇದೇ ವೇಳೆ ಅವರಿಗೆ ತಂತಮ್ಮ ಪಿಂಚಣಿ ಸದಸ್ಯತ್ವ ಇಟ್ಟುಕೊಳ್ಳಲು ಅವಕಾಶ ಕೊಟ್ಟಿದೆ.

ಕೋವಿಡ್-19 ಮುಂಗಡದ 2ನೇ ನಾನ್‌-ರಿಫಂಡಬಲ್‌ ಕಂತನ್ನು ಪಡೆದುಕೊಳ್ಳಲು ಇಪಿಎಫ್‌ಓ ಇದೇ ಮೇನಲ್ಲಿ ಅನುಮತಿ ಕೊಟ್ಟಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...