ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದ್ದು, ಇದೀಗ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ಭಕ್ತನೋರ್ವ, ಜನರಲ್ಲಿ ಸಾಮರಸ್ಯ ಮೂಡಲಿ ಎಂದು ಪ್ರಾರ್ಥಿಸಿ ದೇವರ ಮೊರೆ ಹೋದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಚಿಮ್ಮನಹಳ್ಳಿ ದುರ್ಗಾಂಬಿಕಾ ರಥೋತ್ಸವ ನಡೆಯುತ್ತಿದ್ದು, ಯುವಕನೊಬ್ಬ ಬಾಳೆಹಣ್ಣಿನ ಮೇಲೆ ಜಾತೀಯತೆ ಅಳಿಯಲಿ, ಸಮಾನತೆ ಬೆಳೆಯಲಿ ಎಂದು ಬರೆದು ಬಾಳೆಹಣ್ಣನ್ನು ರಥಕ್ಕೆ ಎಸೆದಿದ್ದಾನೆ.
ಸಾಮರಸ್ಯದ ಸಂದೇಶ ಸಾರುವ ಬಾಳೆಹಣ್ಣನ್ನು ರಥಕ್ಕೆ ಸಮರ್ಪಿಸಿ, ರಾಜ್ಯದಲ್ಲಿ ಎದ್ದಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಅಂತ್ಯಗೊಂಡು ಶಾಂತಿ, ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸಿದ್ದಾನೆ.