ವಿಜಯಪುರ: ಪಂಚಮಸಾಲಿ ಸಮುದಾಯದ ಮೀಸಲಾತಿ ವಿಚಾರ ವಿಳಂಬವಾಗುತ್ತಿರುವ ಬೆನ್ನಲ್ಲೇ ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಸಚಿವ ನಿರಾಣಿ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ತಾಕತ್ತಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ಯತ್ನಾಳ್ ಸವಾಲು ಹಾಕಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ನಿರಾಣಿ ನಿಜಕ್ಕೂ ಅವರಪ್ಪನಿಗೆ ಹುಟ್ಟಿದ್ದರೆ ಸಿಡಿ ಬಿಡುಗಡೆ ಮಾಡಲಿ. ಯಾರ ಯಾರದ್ದೋ ಸಿಡಿ ಇಟ್ಟುಕೊಂಡು ಇವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಸಿಡಿ ಇಟ್ಟುಕೊಂಡೇ ಇವರು ಮಂತ್ರಿ ಆಗ್ತಾರೆ ಎಂದು ಕಿಡಿಕಾರಿದರು.
ನಾನು ಇಂತಹ ಕೆಲಸ ಮಾಡಲ್ಲ. ಜನರಿಗೆ ಎಲ್ಲವೂ ಗೊತ್ತು. ಯಾರು ಒಳ್ಳೆಯವರು, ಯಾರು ಕೆಟ್ಟವರು, ಸಮಾಜದ ಪರವಾಗಿ ಯಾರಿದ್ದಾರೆ, ಸಮಾಜದ ಹೆಸರಲ್ಲಿ ಯಾರು ಲಾಭ ಪಡೆಯುತ್ತಿದ್ದಾರೆ ಎಲ್ಲವೂ ಗೊತ್ತು. ನಮ್ಮನ್ನು ಸೋಲಿಸಲು ನಿರಾಣಿ, ಬಿ.ವೈ.ವಿಜಯೇಂದ್ರ ಹಾಗೂ ಸತೀಶ್ ಜಾರಕಿಹೊಳಿ ದುಡ್ಡು ಕಳುಹಿಸಲಿದ್ದಾರೆ. ವಿಜಯಪುರದ ಜನ ಅವರಿಂದ ಹಣ ಪಡೆದು ನಮಗೆ ವೋಟು ಹಾಕುವುದು ನಿಶ್ಚಿತ ಎಂದು ಹೇಳಿದರು.