ಭಾರತದಾದ್ಯಂತ ಏರ್ ಟೆಲ್ ಬಳಕೆದಾರರು ಇಂದು ಅಲ್ಪಾವಧಿಯ ಸ್ಥಗಿತವನ್ನು ಎದುರಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ಈ ಬಗ್ಗೆ ದೂರಿದ್ದಾರೆ.
ತಾಂತ್ರಿಕ ದೋಷದಿಂದಾಗಿ ದೇಶಾದ್ಯಂತ ಏರ್ ಟೆಲ್ ಕೆಲ ಕಾಲ ಸ್ಥಗಿತಗೊಂಡಿದ್ದು, ಗ್ರಾಹಕರು ಸಮಸ್ಯೆಗೀಡಾಗಿದ್ದಾರೆ. ಏಕಾಏಕಿ ಏರ್ ಟೆಲ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಳಕೆದಾರರು ಸಾಮಾಜಿಕ ಜಾತಾಣಗಳಲ್ಲಿ ಏರ್ ಟೆಲ್ ಡೌನ್ ಆಗಿರುವ ಬಗ್ಗೆ ದೂರಿದ್ದಾರೆ.
ಆನ್‌ಲೈನ್‌ನಲ್ಲಿ ದೂರುಗಳ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಟೆಲಿಕಾಂ ಸಂಸ್ಥೆ, ತಕ್ಷಣ ಸಮಸ್ಯೆಯನ್ನು ಪರಿಹರಿಸಿದೆ.
ಸಾಮಾಜಿಕ ತಾಣಗಳಲ್ಲಿನ ವರದಿ ಪ್ರಕಾರ, ಈ ಸಮಸ್ಯೆಯು ಟೆಲಿಕಾಂ ನೆಟ್‌ವರ್ಕ್‌ನಲ್ಲಿ ಬ್ರಾಡ್‌ಬ್ಯಾಂಡ್ ಮತ್ತು ಸೆಲ್ಯುಲಾರ್ ಬಳಕೆದಾರರ ಮೇಲೆ ಪರಿಣಾಮ ಬೀರಿದೆ.
ಸೇವೆ ಮರುಸ್ಥಾಪನೆ ಬಳಿಕ ಮಾಹಿತಿ ನೀಡಿರುವ ಏರ್‌ಟೆಲ್ ವಕ್ತಾರರು, ಗ್ಯಾಜೆಟ್ 360 ಸಮಸ್ಯೆಯಾಗಿದ್ದು, ತಕ್ಷಣ ಸೇವೆ ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.