ಮೈಸೂರು: 2023 ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಭರದ ಸಿದ್ಧತೆ ಆರಂಭವಾಗಿದೆ. ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಇದೇ ನನ್ನ ಕೊನೇ ಚುನಾವಣೆ. ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂದು ಘೋಷಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಸೋಲಿಗೆ ಕಾರಣವೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಈ ಬಗ್ಗೆ ಸ್ಪಷ್ಟತೆ ಇದೆ ಎಂದು ಹೇಳಿದರು. ನನ್ನ ಕೋಪ ಕ್ಷೇತ್ರದ ಮತದಾರರ ಮೇಲಲ್ಲ, ಕಾರ್ಯಕರ್ತರ ಮೇಲೆ. ಚಾಮುಂಡೇಶ್ವರಿಯಲ್ಲಿ 5 ಬಾರಿ ಗೆಲ್ಲಿಸಿ, 3 ಬಾರಿ ಸೋಲಿಸಿದರು ಎಂದು ತಿಳಿಸಿದ್ದಾರೆ.
ಲಿಂಗಾಯಿತರನ್ನು ಒಡೆದವನು ನಾನು ಎಂದು ಆರೋಪಿಸಿದರು. ಮೇಲ್ವರ್ಗದವರ ವಿರೋಧಿ ಎಂದು ಹೇಳಿದ್ರು. ಸದಾಶಿವ ಆಯೋಗ ಜಾರಿ ಮಾಡಿಲ್ಲ ಎಂದು ಬಿಂಬಿಸಿದ್ರು. ನಮ್ಮವರೇ ನನ್ನ ಅಪಪ್ರಚಾರ ಮಾಡಿ ಸೋಲಿಸಿದ್ರು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.