ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ಬಾಲಿವುಡ್ ನಟನ ಜಮೀನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ. ಸಿಎಂ ಬೊಮ್ಮಾಯಿ ಅವರೇ ನಿಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಲ್ಯಾಂಡ್ ಮಾಫಿಯಾದವರಿಗೆ ಬೆಂಬಲವಾಗಿದ್ದಾರೆಯೇ ? IAS ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಪತಿಯ ಅಕ್ರಮ ಕೆಲಸಗಳಿಗೆ ಸಹಕರಿಸುತ್ತಿರುವುದನ್ನು ತನಿಖೆಗೆ ಒಳಪಡಿಸಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಡಿಜಿಪಿ ಅವರೇ, ತಮ್ಮ ಇಲಾಖೆ ಕಾನೂನು ಪಾಲಿಸುತ್ತಿದೆಯೋ? ಅಥವಾ ಮಾಫಿಯಾವನ್ನು ಪಾಲನೆ ಮಾಡುತ್ತಿದೆಯೋ? ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.
IAS ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಪತಿಯ ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆಯ ಕೆಲಸಗಳಿಗೆ ಸಹಕರಿಸುತ್ತಿರುವ ಆರೋಪ ಕೇಳಿ ಬಂದಿದೆ. ಬೊಮ್ಮಾಯಿ ಅವರೇ, ತಮ್ಮ ಸರ್ಕಾರ ರೌಡಿಸಂ, ಲ್ಯಾಂಡ್ ಮಾಫಿಯಾ, 40% ಕಮಿಷನ್ಗಳಲ್ಲೇ ಮುಳುಗಿದ್ದರೂ ಯಾವೊಂದು ಸಂಗತಿಯೂ ತಮ್ಮ ಗಮನಕ್ಕೆ ಬರಲಿಲ್ಲವೇ? ಅಥವಾ ಎಲ್ಲವೂ ನಿಮ್ಮ ಅಣತಿಯಲ್ಲೇ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದೆ.