ಚಲಿಸುತ್ತಿದ್ದ ನ್ಯಾನೋ ಕಾರು ನಟ್ಟನಡು ರಸ್ತೆಯಲ್ಲೆ ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಇಂದು ಬೆಳಗ್ಗೆ ನ್ಯಾನೋ ಕಾರು ಹೊತ್ತಿ ಉರಿದಿದ್ದು ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ.
ಎಂಟು ತಿಂಗಳ ಮಗು, ಇಬ್ಬರು ಮಕ್ಕಳು, ದಂಪತಿ ಸೇರಿ ಆರು ಜನರು ಕಾರಿನಲ್ಲಿ ಪ್ರಯಾಣ ಮಾಡ್ತಿದ್ರು. ಪ್ರಯಾಣ ಮಾಡ್ತಿದ್ದ ಸಂದರ್ಭದಲ್ಲಿ ಕಾರು ಒಮ್ಮೆ ಆಫ್ ಆಗಿತ್ತು, ರಿಸ್ಕ್ ತಗೊಳೋದು ಬೇಡ ಎಂದುಕೊಂಡ ಪತಿ ಕಾರಿನಲ್ಲಿದ್ದವರನ್ನ ಇಳಿಸಿ ಆಟೋ ಹತ್ತಿಸಿ ಕಳಿಸಿದ್ರು. ಆನಂತರ ಕಾರ್ ಸ್ಟಾರ್ಟ್ ಮಾಡಿಕೊಂಡು ಕೇವಲ ನೂರು ಮೀಟರ್ ಮುಂದಕ್ಕೆ ವಾಹನ ಚಲಿಸಿತ್ತಷ್ಟೇ, ನೋಡನೋಡ್ತಿದ್ದಂತೆ ಚಲಿಸುತ್ತಿದ್ದ ಕಾರಿಗೆ ಬೆಂಕಿಹೊತ್ತಿಕೊಂಡಿದೆ.
12 ಗಂಟೆಗಳಲ್ಲಿ ತಡೆರಹಿತವಾಗಿ ಟ್ರೆಡ್‌ಮಿಲ್‌ನಲ್ಲಿ 66 ಕಿ.ಮೀ ಓಡಿದ ಮೊರಾದಾಬಾದ್ ಎಕ್ಸ್‌ಪ್ರೆಸ್..!
ಈ ವೇಳೆ ಕಾರ್ ಚಲಾಯಿಸುತ್ತಿದ್ದದು ಚೇತನ್ ಮಾತ್ರ. ಕಾರ್ ಡೋರ್ ಲಾಕ್ ಆಗಿತ್ತು, ಬೆಂಕಿ ಹತ್ತಿಕೊಂಡಿದ್ದರಿಂದ ಕ್ಷಣಕಾಲ ಕಂಗಾಲಾದರು, ಚೇತನ್ ಮರು ಯೋಚಿಸದೆ ಕಾರ್ ಡೋರ್ ಹೊಡೆದು ಹೊರಗೆ ಜಂಪ್ ಮಾಡಿದ್ದಾರೆ. ಹನ್ನೆರಡು ಸಾವಿರ ನಗದು, ಲಗೇಜ್ ಸೇರಿ ಕಾರಿನಲ್ಲಿದ್ದ ಎಲ್ಲಾ ವಸ್ತುಗಳು ಕಾರಿನಲ್ಲೇ ಸುಟ್ಟು ಕರಕಲಾಗಿದೆ. ಆದರೆ ಚೇತನ್ ಸಮಯ ಪ್ರಜ್ಞೆಯಿಂದ ಇಡೀ ಕುಟುಂಬಕ್ಕೆ ಸಣ್ಣ ಹಾನಿಯಾಗದೆ ಸುರಕ್ಷಿತವಾಗಿದ್ದಾರೆ.