ಟೀಂ ಇಂಡಿಯಾದ ನಿವೃತ್ತ ಮೆಂಟಲ್ ಕಂಡಿಷನಿಂಗ್ ಕೋಚ್ ಪಾಡ್ಯಾ ಉಪ್ಟನ್ ತಂಡದ ಸದಸ್ಯರಿಗೆ ನೀಡಿದ ಸಲಹೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಇದನ್ನ ಕೇಳಿದ ಜನತೆ ಶಾಕ್ ಆಗಿದ್ದಾರೆ.
ಭಾರತೀಯ ಕ್ರಿಕೆಟ್ ಟೀಂನಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿರುವ ಇವರು ಆಟಗಾರರಿಗೆ ಪಂದ್ಯಕ್ಕೂ ಮುನ್ನ ಸೆಕ್ಸ್ ಮಾಡಿ ಎಂದು ಸಲಹೆ ನೀಡಿದ್ದರಂತೆ..! ಪ್ಯಾಡಿ ಉಪ್ಟನ್ ತಮ್ಮ ಪುಸ್ತಕ ‘ದಿ ಬೇರ್ಫೂಟ್ ಕೋಚ್’ ಎಂಬ ಪುಸ್ತಕದಲ್ಲಿ ಈ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ.
ಉಪ್ಟನ್ ನೀಡಿದ ಈ ಸಲಹೆಯನ್ನ ಕೇಳುತ್ತಿದ್ದಂತೆಯೇ ಮುಖ್ಯ ಕೋಚ್ ಗ್ಯಾರಿ ಕ್ರಸ್ಟನ್ ಫುಲ್ ಗರಂ ಆಗಿದ್ದರಂತೆ. ಗ್ಯಾರಿ ಕ್ರಸ್ಟನ್ ಟೀಂ ಇಂಡಿಯಾದ ಕೋಚ್ ಆಗಿದ್ದ ವೇಳೆಯಲ್ಲಿ ಅಂದರೆ 2011ರಲ್ಲಿ ಟೀಂ ಇಂಡಿಯಾ ವಿಶ್ವ ಕಪ್ ಪಂದ್ಯವನ್ನ ಗೆದ್ದಿತ್ತು ಅನ್ನೋದನ್ನ ನಾವಿಲ್ಲಿ ಸ್ಮರಿಸಬಹುದಾಗಿದೆ. ಗ್ಯಾರಿ ಗರಂ ಆಗುತ್ತಿದ್ದಂತೆಯೇ ಉಪ್ಟನ್ ಈ ಸಲಹೆಗಾಗಿ ಕ್ಷಮೆ ಯಾಚಿಸಿದ್ದರಂತೆ.
ಮೆಂಟಲ್ ಕಂಡಿಷನಿಂಗ್ ಕೋಚ್ ಆಗಿದ್ದ ಉಪ್ಟನ್ ಈ ವಿಚಾರವಾಗಿ ಅನುಭವ ಹಂಚಿಕೊಂಡಿದ್ದು, ತಾವು ಈ ರೀತಿಯ ಸೆಕ್ಸ್ ಸಲಹೆ ನೀಡುತ್ತಿದ್ದಂತೆಯೇ ಗ್ಯಾರಿ ಕರ್ಸ್ನ್ ಆಕ್ರೋಶ ಹೊರಹಾಕಿದ್ರು. ಪ್ಯಾಡಿ ಪಂದ್ಯಕ್ಕೂ ಮುನ್ನ ಆಟಗಾರರು ಲೈಂಗಿಕ ಕ್ರಿಯೆ ನಡೆಸೋದು ಒಳ್ಳೆಯದು ಎಂದು ಹೇಳಿದ್ದರು. ಅಧ್ಯಯನವೊಂದನ್ನ ಆಧರಿಸಿ ಪ್ಯಾಡಿ ಈ ರೀತಿ ಸಲಹೆ ನೀಡಿದ್ದರಂತೆ.
ಬಳಿಕ ತಮ್ಮ ತಪ್ಪನ್ನ ಒಪ್ಪಿಕೊಂಡ ಪ್ಯಾಡಿ ಉಉಪ್ಟನ್, ಟೀಂ ಇಂಡಿಯಾ ಆಟಗಾರರಿಗೆ ಈ ರೀತಿ ಸೆಕ್ಸ್ ಸಲಹೆ ನೀಡಿದ್ದರಲ್ಲಿ ನನ್ನ ತಪ್ಪಿದೆ ಎಂದು ಹೇಳಿದ್ದಾರೆ. ಉಪ್ಟನ್ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಉಪ್ಟನ್ ತಮ್ಮ ಪುಸ್ತಕದಲ್ಲಿ ರಾಹುಲ್ ದ್ರಾವಿಡ್ ಹಾಗೂ ಗೌತಮ್ ಗಂಭೀರ್ ಸೇರಿದಂತೆ ಎಲ್ಲಾ ಆಟಗಾರರನ್ನ ಸ್ಮರಿಸಿದ್ದಾರೆ. 2009ರಲ್ಲಿ ಆಡಲಾಗಿದ್ದ ಚಾಂಪಿಯನ್ ಟ್ರೋಫಿಗೂ ಮುನ್ನ ಮಾಡಬೇಕಾದ ತಯಾರಿಯ ಬಗ್ಗೆ ನೋಟ್ಸ್ ಮಾಡುತ್ತಿದ್ದೆ. ಈ ವೇಳೆ ತಾನು ಸೆಕ್ಸ್ ಬಗ್ಗೆ ಉಲ್ಲೇಖಿಸಿದ್ದೆ ಎಂದು ಹೇಳಿದ್ದಾರೆ.
ಬೌಲರ್ ಶ್ರೀಶಾಂತ್ ವಿಚಾರವಾಗಿಯೂ ಮಾತನಾಡಿದ ಉಪ್ಟನ್, ಶ್ರೀಶಾಂತ್ ಹಿಂದೊಮ್ಮೆ ರಾಹುಲ್ ದ್ರಾವಿಡ್ರಿಗೆ ಬೈದು ಬಿಟ್ಟಿದ್ದರು ಎಂಬುದನ್ನ ಸ್ಮರಿಸಿದ್ರು. ಇದನ್ನ ಹೊರತುಪಡಿಸಿ ಧೋನಿಯನ್ನ ಹಾಡಿ ಹೊಗಳಿರುವ ಉಪ್ಟನ್ ಶಾಂತ ರೀತಿಯಲ್ಲಿ ವರ್ತಿಸೋದೇ ಧೋನಿಯ ನಿಜವಾದ ಶಕ್ತಿಯಾಗಿದೆ. ಪಂದ್ಯ ಎಷ್ಟೇ ಕಠಿಣವಾಗಿದ್ರೂ ಸಹ ಧೋನಿ ಶಾಂತವಾಗಿ ಇರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ರು.