ಭಾರತೀಯ ಷೇರು ಮಾರುಕಟ್ಟೆ ಬುಧವಾರ ಬಹುತೇಕ ತಟಸ್ಥವಾಗಿತ್ತು. ಬಿಎಸ್‌ಇ ಸೆನ್ಸೆಕ್ಸ್ 36 ಪಾಯಿಂಟ್‌ಗಳ ಕುಸಿತದೊಂದಿಗೆ 58,817ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ICICI ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಲಾರ್ಸೆನ್ & ಟೂಬ್ರೊ 17,500 ಪಾಯಿಂಟ್‌ಗಳಿಗೆ ಹಿಡಿತ ಸಾಧಿಸಲು ಸಹಾಯ ಮಾಡುವ ಮೂಲಕ ನಿಫ್ಟಿ ಅಲ್ಪ ಏರಿಕೆಯೊಂದಿಗೆ 17,534ಕ್ಕೆ ಕೊನೆಗೊಂಡಿದೆ.
ಬಡ್ಡಿ ದರಗಳಲ್ಲಿ ಏರಿಕೆ ಹಾಗೂ ಅಮೆರಿಕದಲ್ಲಿನ ಹಣದುಬ್ಬರ ಪ್ರಪಂಚದಾದ್ಯಂತ ಷೇರುಪೇಟೆಯ ಮೇಲೆ ಪರಿಣಾಮ ಬೀರಿದೆ. ಷೇರುಗಳ ಮೌಲ್ಯ ಬಾರೀ ಕುಸಿತ ಕಂಡಿದೆ. ಆದರೂ ಐಟಿ ವಲಯಕ್ಕೆ ಹೇಳಿಕೊಳ್ಳುವಂತಹ ನಷ್ಟವೇನಾಗಿಲ್ಲ. ಹಿಂಡಾಲ್ಕೊ, ಯುಪಿಎಲ್, ಕೋಲ್ ಇಂಡಿಯಾ, ಅಪೊಲೊ ಹಾಸ್ಪಿಟಲ್ಸ್ ಮತ್ತು ಟಾಟಾ ಸ್ಟೀಲ್ ಷೇರುಗಳು ಶೇ.4.4ರಷ್ಟು ಏರಿಕೆ ಕಂಡಿದ್ದು, ಈ ಕಂಪನಿಗಳು ಲಾಭದ ಹಾದಿಯಲ್ಲಿವೆ. ಹಿಂಡಾಲ್ಕೊ ವಲಯದ ಗೇಜ್ ನಿಫ್ಟಿ ಮೆಟಲ್ 1.5 ಪರ್ಸೆಂಟ್ ಏರಿಕೆಯೊಂದಿಗೆ ಬಲವಾದ ಗಳಿಕೆಯನ್ನು ಪ್ರಕಟಿಸಿದ ನಂತರ ಮೆಟಲ್ ಷೇರುಗಳು ಏರಿಕೆ ಕಂಡಿವೆ.
ಹಿಂಡಾಲ್ಕೊಗೆ ನಿವ್ವಳ ಲಾಭ
ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಹಿಂಡಾಲ್ಕೊ ಆದಾಯ 2,787 ಕೋಟಿ ರೂಪಾಯಿ ಇತ್ತು. 48 ಪ್ರತಿಶತ ಜಿಗಿತದೊಂದಿಗೆ ದಾಖಲೆಯ ಗರಿಷ್ಠ ರೂ.4,119 ಕೋಟಿಗೆ ಈಗ ಏರಿದೆ. ಹಿಂಡಾಲ್ಕೊದ ಆದಾಯವು ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 41,358 ಕೋಟಿ ರೂಪಾಯಿ ಇತ್ತು, ಈಗ 40 ಪ್ರತಿಶತದಷ್ಟು ಏರಿಕೆಯಾಗಿ 58,018 ಕೋಟಿ ರೂಪಾಯಿಗಳಿಗೆ ತಲುಪಿದೆ.
ಪಿಡಿಲೈಟ್ ಇಂಡಸ್ಟ್ರೀಸ್
ಗ್ರಾಹಕ ಮತ್ತು ಕೈಗಾರಿಕಾ ವಿಶೇಷ ರಾಸಾಯನಿಕಗಳ ತಯಾರಕ ಕಂಪನಿ ಮತ್ತದರ ಬ್ರ್ಯಾಂಡ್‌ಗಳು ಫೆವಿಕಾಲ್ ಅನ್ನು ಸಹ ಒಳಗೊಂಡಿವೆ. ಏಪ್ರಿಲ್-ಜೂನ್ ಅವಧಿಯಲ್ಲಿ ಕಂಪನಿಯ ಆದಾಯ 64.3 ರಷ್ಟು ಜಿಗಿದಿದ್ದು, ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ 357.5 ಕೋಟಿ ರೂಪಾಯಿ ಆಗಿದೆ. ನಿಫ್ಟಿಯಲ್ಲಿ ಸೋತವರಲ್ಲಿ ಬಜಾಜ್ ಫೈನಾನ್ಸ್ ಷೇರುಗಳು ಶೇಕಡಾ 2.6 ಕ್ಕಿಂತ ಹೆಚ್ಚು ಕುಸಿದಿದ್ದರೆ, ಎನ್‌ಟಿಪಿಸಿ ಶೇ.2.3 ರಷ್ಟು ಕುಸಿತ ಕಂಡಿದೆ. ಒಎನ್‌ಜಿಸಿ, ಎಚ್‌ಸಿಎಲ್ ಟೆಕ್ ಮತ್ತು ಅದಾನಿ ಪೋರ್ಟ್‌ಗಳ ಷೇರುಗಳು ಕೂಡ ಶೇ.2 ರಷ್ಟು ಕುಸಿದಿವೆ.
ಎಂಆರ್‌ಎಫ್
ಎಂಆರ್‌ಎಫ್ ಕೂಡ ನಷ್ಟದ ಹಾದಿಯಲ್ಲೇ ಸಾಗಿದೆ. ಟೈರ್ ತಯಾರಕ ಕಂಪನಿ ತ್ರೈಮಾಸಿಕ ನಿವ್ವಳ ಲಾಭದಲ್ಲಿ 29 ಪ್ರತಿಶತ ಕುಸಿತ ಕಂಡಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯೇ ಇದಕ್ಕೆ ಕಾರಣ ಎನ್ನಲಾಗ್ತಿದೆ. MRF ಷೇರುಗಳು ಶೇ.5.8ರಷ್ಟು ಕುಸಿತ ಕಂಡಿವೆ. ಭಾರತೀಯ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು 79.52ರಷ್ಟಾಗಿದೆ. ಕಳೆದೆರಡು ದಿನಕ್ಕೆ ಹೋಲಿಸಿದ್ರೆ ರೂಪಾಯಿ ಮೌಲ್ಯ ಕೊಂಚ ಚೇತರಿಕೆ ಕಂಡಿದೆ.
ಚೀನಾದ ಶಾಂಘೈ ಕಾಂಪೋಸಿಟ್ ಶೇ.0.5ರಷ್ಟು ಕುಸಿದರೆ, ದಕ್ಷಿಣ ಕೊರಿಯಾದ ಕೊಸ್ಪಿ, ಜಪಾನ್‌ನ ನಿಕ್ಕಿ 225 ಮತ್ತು ತೈವಾನ್‌ನ ಟೈಕ್ಸ್ ಶೇ.0.7-0.9ರಷ್ಟು ನಷ್ಟದೊಂದಿಗೆ ಅಂತ್ಯಗೊಂಡಿವೆ. ಈ ಮಧ್ಯೆ, ದಲಾಲ್ ಸ್ಟ್ರೀಟ್ ತನ್ನ ಮೊದಲ IPO ಅಥವಾ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಹೊರತರಲು ಸಿದ್ಧವಾಗಿದೆ.
ಸಿರ್ಮಾ SGS IPO
ಚೆನ್ನೈ ಮೂಲದ ಈ ಎಂಜಿನಿಯರಿಂಗ್ ಮತ್ತು ವಿನ್ಯಾಸ ಕಂಪನಿಯ ಷೇರುಗಳು ಆಗಸ್ಟ್ 12 ರಂದು ಚಂದಾದಾರಿಕೆಗಾಗಿ ತೆರೆದಿರಲಿವೆ. ಆಗಸ್ಟ್ 18 ರಂದು ಕೊಡುವೆ ಅಂತ್ಯವಾಗಲಿದೆ.