ಬೆಂಗಳೂರು: ಡ್ರೀಮ್ 11 ಆನ್ ಲೈನ್ ಗೇಮ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಬೆಂಗಳೂರಿನ ಅನ್ನಪೂರ್ನೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡ್ರೀಮ್ ಆನ್ ಲೈನ್ ಗೇಮ್ ಅಡಿ ಕೋಟ್ಯಂತರ ರೂಪಾಯಿ ಹಣ ಸಂಪಾದಿಸಬಹುದು ಎಂದು ಸುಳ್ಳು ಭರವಸೆಗಳನ್ನು ನೀಡಿ ವಂಚಿಸಲಾಗುತ್ತಿತ್ತು. ಡ್ರೀಮ್ 11 ಕಂಪನಿಯ ನಿರ್ದೇಶಕ ಭವಿತ್ ಸೇತ್ ಹಾಗೂ ಹರೀಶ್ ಜೈನ್ ಎಂಬುವವರ ವಿರುದ್ಧ ಮಂಜುನಾಥ್ ಎಂಬುವವರು ದೂರು ನೀಡಿದ್ದರು.
ಸ್ಮಾರ್ಟ್ ಆಗಿ ಕೆಲಸ ಶುರು ಮಾಡಿ ಕೈ ತುಂಬ ಗಳಿಸಿ
ಇದೀಗ ಕರ್ನಾಟಕ ಪೊಲೀಸ್ ಆಕ್ಟ್ 2021ರ ಪ್ರಕಾರ ಭವಿತ್ ಸೇತ್ ಹಾಗೂ ಹರೀಶ್ ಜೈನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಡ್ರೀಮ್11 ಗೇಮ್ ನ್ನು ನಿಷೇಧಿಸಲಾಗಿದೆ.