ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಎನ್ ಸಿ ಬಿ ಕ್ಲೀನ್ ಚಿಟ್ ನೀಡಿದೆ.
2021ರ ಅಕ್ಟೋಬರ್ 2ರಂದು ಮುಂಬೈನ ಐಷಾರಾಮಿ ಹಡಗಿನಲ್ಲಿ ಆಯೋಜಿಸಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಎನ್ ಸಿ ಬಿ ಅಧಿಕಾರಿಗಳ ತಂಡ ಆರ್ಯನ್ ಖಾನ್ ಸೇರಿದಂತೆ 19 ಜನರನ್ನು ಬಂಧಿಸಿತ್ತು. ಅಕ್ಟೋಬರ್ 30ರಂದು ಜಾಮೀನಿನ ಮೇಲೆ ಆರ್ಯನ್ ಖಾನ್ ಹೊರ ಬಂದಿದ್ದರು.
ಇದೀಗ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ ಸಂಬಂಧ ಮುಂಬೈನ ಎನ್ ಸಿ ಬಿ ಅಧಿಕಾರಿಗಳು ಚಾರ್ಜ್ ಶೀಟ್ ಫೈಲ್ ಮಾಡಿದ್ದು, ಆರ್ಯನ್ ಖಾನ್ ಸೇರಿದಂತೆ ಒಟ್ಟು 6 ಜನರ ಹೆಸರನ್ನು ಕೈಬಿಟ್ಟಿದೆ.
ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ ಹಾಗೂ ಆರ್ಯನ್ ವಿರುದ್ಧ ಸೂಕ್ತ ಸಾಕ್ಷಾಧಾರಗಳಿಲ್ಲ ಎಂಬ ಕಾರಣಕ್ಕೆ ಪ್ರಕರಣದಿಂದ ಆರ್ಯನ್ ಖಾನ್ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.