ಬೆಂಗಳೂರು: ಭ್ರಷ್ಟಾಚಾರ ಎಂದರೆ ಡಿ.ಕೆ.ಶಿವಕುಮಾರ್, ಡಿ.ಕೆ.ಶಿವಕುಮಾರ್ ಎಂದರೆ ಭ್ರಷ್ಟಾಚಾರ. ಅವರು ಮಾಡಿರುವ ಕರ್ಮಕಾಂಡಗಳಿಗೆ ಸಿಗಬೇಕಾದ ಪರ್ಮನೆಂಟ್ ಜಾಗವೆಂದರೆ ತಿಹಾರ್ ಜೈಲು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾನು ಕಾಂಗ್ರೆಸ್ ನ ಯಾವ ನಾಯಕರನ್ನೂ ಭೇಟಿಯಾಗಿಲ್ಲ. ಅನಗತ್ಯವಾಗಿ ಡಿ.ಕೆ.ಶಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾವ ಹುದ್ದೆ ನೇಮಕಾತಿಗಾಗಿಯೂ ಭ್ರಷ್ಟಾಚಾರ ನಡೆಸಿಯೂ ಇಲ್ಲ. ನಾನು ಹಣ, ಅಧಿಕಾರ, ಕುಟುಂಬ ರಾಜಕಾರಣಕ್ಕೆ ಬಂದವನಲ್ಲ. ಜನರ ಸೇವೆಗಾಗಿ ರಾಜಕಾರಣಕ್ಕೆ ಬಂದಿದ್ದೇನೆ ಎಂದರು.
BIG NEWS: ಧ್ವನಿವರ್ಧಕಗಳಿಗೆ ನಿಯಮ; ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ; ಸಚಿವ ಆನಂದ್ ಸಿಂಗ್ ಎಚ್ಚರಿಕೆ
ಡಿ.ಕೆ.ಶಿವಕುಮಾರ್ ಅವರದ್ದು ಭ್ರಷ್ಟಾಚಾರವೇ ಜೀವನ. ಸಿಕ್ಕ ಸಿಕ್ಕಲ್ಲಿ ಲೂಟಿ ಮಾಡಿದ್ದಾರೆ. ಅವರು ಮಾಡಿದ ಕರ್ಮಕಾಂಡಕ್ಕೆ ಪರ್ಮನೆಂಟ್ ಆಗಿ ತಿಹಾರ್ ಜೈಲಿಗೆ ಹೋಗುತ್ತಾರೆ. ಅವರೊಬ್ಬ ಜೈಲುಹಕ್ಕಿ. ಅವರ ಮಾತನ್ನು ಯಾರೂ ನಂಬುವುದೂ ಇಲ್ಲ ಕೇಳುವುದೂ ಇಲ್ಲ. ಮಾನ ಮರ್ಯಾದೆ ಇದ್ದರೆ ಡಿ.ಕೆ.ಶಿವಕುಮಾರ್, ನನ್ನ ವಿರುದ್ಧ ಮಾಡುವ ಆರೋಪಗಳಿಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.