ನವದೆಹಲಿ; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2023-24ನೇ ಸಾಲಿನ ಕೇಂದ್ರ ಬಜೆಟ್ ಡಬ್ಬಾ ಬಜೆಟ್. ಯುವ ಜನತೆಗೆ, ಉದ್ಯೋಗ ಸೃಷ್ಟಿ ವಿಚಾರವಾಗಿ ಏನನ್ನೂ ಘೋಷಣೆ ಮಾಡಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ಭರವಸೆಗಳು ಬಜೆಟ್ ನಲ್ಲಿ ಮುಂದುವರೆದಿವೆ. ಸಿರಿಧಾನ್ಯಗಳಿಗೆ ಹೊಸ ಹೆಸರು ಇಟ್ಟು ನೆನಪಿಸಿದ್ದಾರೆ. ಈ ಮೂಲಕ ಹೆಸರು ಬದಲಿಸುವ ಅವರ ಯೋಜನೆ ಮುಂದುವರೆದಿದೆ ಎಂದು ಕಿಡಿಕಾರಿದರು.
ಕೋವಿಡ್ ನಿಂದ ತತ್ತರಿಸಿದ ಜನರಿಗೆ ಯಾವುದೇ ಪರಿಹಾರವಿಲ್ಲ. ದೇಶದ 130 ಕೋಟಿ ಜನರಿಗೆ ಮೋಸ ಮಾಡುವ ಶೂನ್ಯ ಬಜೆಟ್ ಇದು ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಣೆ ಮಾಡಿದ್ದಾರೆ. ಜಾರಿಯಾಗದ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನಿಡಿದೆ, ರಾಜ್ಯಕ್ಕೆ ಬರಬೇಕಿದ್ದ ಅನುದಾನವೇ ಇನ್ನೂ ಬಂದಿಲ್ಲ. ಈಗ ಹೊಸ ಅನುದಾನ ಘೋಷಣೆ ಮಾಡಿದ್ದಾರೆ. ಬಜೆಟ್ ಮೂಲಕ ಸುಳ್ಳು ಭರವಸೆ ಮುಂದುವರೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.