ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ನ್ನು ಸ್ವಾಧೀನಪಡಿಸಿಕೊಂಡ ನಂತರ ಅಲ್ಲಿ ಹಲವು ಬದಲಾವಣೆಗಳು ಆಗ್ತಾ ಇವೆ. ಕಂಪನಿಯಲ್ಲಿ ಹೆಚ್ಚು ಗಂಟೆ ಕೆಲಸ ಮಾಡಬೇಕು, ವಾರದ ರಜೆ ಇರೋದಿಲ್ಲ ಎಂದು ಹೇಳಿದ್ದ ಮಸ್ಕ್ ಇದೀಗ ಕಂಪನಿಯಲ್ಲಿ ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆಗೆ ಕೈ ಹಾಕಿದ್ದಾರೆ. ಈಗಿರುವ ಸುಮಾರು 7500 ಮಂದಿ ಕಾರ್ಮಿಕರಲ್ಲಿ ಅರ್ಧದಷ್ಟು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು, ತನ್ನ ಉದ್ಯೋಗಿಗಳಿಗೆ ಇಮೇಲ್ ಮೂಲಕ ಈ ವಿಚಾರ ತಿಳಿಸಲಾಗಿದೆ. ಕಂಪನಿಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು. ಅಲ್ಲದೆ ನೌಕರರಿಗೆ ಶುಕ್ರವಾರ ಮನೆಗೆ ಹೋಗುವಂತೆ ಮತ್ತು ಕಚೇರಿಗಳಿಗೆ ಹಿಂತಿರುಗದಂತೆ ಕೆಲಸಗಾರರಿಗೆ ಸೂಚಿಸಲಾಗಿದೆಯಂತೆ. ಜೊತೆಗೆ ಒಂದಿಷ್ಟು ಜನರಿಗೆ ಕಂಪನಿಗೆ ಪ್ರವೇಶ ನಿರಾಕರಿಸಲಾಗಿದೆಯಂತೆ.
ಕೆಲವು ಬದಲಾವಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಹಾಗೂ ವೆಚ್ಚ ಕಡಿತ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಕೆಲಸದಲ್ಲಿ ಉಳಿಸಿಕೊಳ್ಳುವ ಉದ್ಯೋಗಿಗಳಿಗೆ ಇ ಮೇಲ್ ಮುಖಾಂತರ ತಿಳಿಸಲಾಗುತ್ತದೆ ಎಂದು ಹೇಳಲಾಗಿದೆಯಂತೆ. ಮೇಲ್ ಬರುತ್ತಿದ್ದಂತೆ ಒಂದಿಷ್ಟು ಜನ ಸ್ವಯಂ ಪ್ರೇರಿತರಾಗಿ ರಾಜಿನಾಮೆ ಪತ್ರ ನೀಡಿದ್ದಾರಂತೆ.