ಟ್ವಿಟರ್‌ನಲ್ಲಿ ಮಾಲೀಕತ್ವ ಬದಲಾಗುತ್ತಿದ್ದಂತೆ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸಲಾಗ್ತಿದೆ. ಅಷ್ಟೇ ಅಲ್ಲ ಬಳಕೆದಾರರಿಗೆ ಮೂಗುದಾರ ಹಾಕುವಂತಹ ಕೆಲವೊಂದು ಬದಲಾವಣೆಗಳನ್ನೂ ಮಾಡಲಾಗುತ್ತಿದೆ. ಟ್ವಿಟರ್ ಆನ್‌ಲೈನ್ ಅಪರಾಧಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ. ಅಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಜೈಲಿಗೂ ಕಳುಹಿಸಬಹುದು.
ನಿಂದನೀಯ ಭಾಷೆಯ ಬಳಕೆ
ನೀವು Twitter ನಲ್ಲಿ ಯಾವುದಾದರೂ ಪೋಸ್ಟ್‌ಗೆ ಕಾಮೆಂಟ್ ಮಾಡುವಾಗ ನಿಂದನೀಯ ಭಾಷೆ ಅಥವಾ ಪದಗಳನ್ನು ಬಳಸಬಾರದು. ಏಕೆಂದರೆ ಈಗ Twitter ನಿಯಮಗಳು ಮೊದಲಿಗಿಂತ ಹೆಚ್ಚು ಕಠಿಣವಾಗಿವೆ. ನೀವು ಈ ತಪ್ಪನ್ನು ಮಾಡಿದರೆ ಜೈಲಿಗೆ ಹೋಗುವ ಅಪಾಯವಿದೆ. ಹಾಗಾಗಿ ಟ್ವೀಟ್‌ಗಳಿಗೆ ಅತ್ಯಂತ ಸಭ್ಯ ಭಾಷೆಯಲ್ಲಿ ಉತ್ತರಿಸಬೇಕು.
ಆಕ್ಷೇಪಾರ್ಹ ಚಿತ್ರಗಳ ಬಳಕೆ
ಟ್ವಿಟರ್‌ನ ನೀತಿಯು ಹೆಚ್ಚು ಕಟ್ಟುನಿಟ್ಟಾಗುತ್ತಿದೆ. ಆಕ್ಷೇಪಾರ್ಹ ಚಿತ್ರಗಳನ್ನು ಬಳಸುವುದರಿಂದ ನೀವು ಕಾನೂನು ತೊಂದರೆಗೆ ಸಿಲುಕಬಹುದು. ಜೈಲಿಗೆ ಹೋಗಬೇಕಾಗಬಹುದು. ಆದ್ದರಿಂದ ಅಂತಹ ಚಿತ್ರಗಳನ್ನು ಬಳಸುವುದನ್ನು ತಪ್ಪಿಸಿ ಮತ್ತು ಅವುಗಳನ್ನು ರಿಟ್ವೀಟ್ ಮಾಡಬೇಡಿ.
ವೀಡಿಯೊ ಪೈರಸಿ
ಟ್ವಿಟರ್‌ನಲ್ಲಿ ವೀಡಿಯೊ ಪೈರಸಿ ಮಾಡುತ್ತಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಿಮ್ಮ ಖಾತೆಯನ್ನು ಅಮಾನತುಗೊಳಿಸಬಹುದು. ಭಾರತದಲ್ಲಿ ವಿಡಿಯೊ ಪೈರಸಿ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ. ಪೈರಸಿ ಮಾಡಿದ್ರೆ ದೀರ್ಘಾವಧಿಯ ಶಿಕ್ಷೆ ಮತ್ತು ದಂಡಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.
ಅನೈತಿಕ ಚಟುವಟಿಕೆಗಳು
ಬಳಕೆದಾರರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದರೆ Twitter ಅವರ ಖಾತೆಯನ್ನು ಮುಚ್ಚುತ್ತದೆ. ಭಾರತ ಸರ್ಕಾರವು ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ. ನೀವು ಟ್ವಿಟರ್‌ನಲ್ಲಿ ಜವಾಬ್ದಾರಿಯುತ ರೀತಿಯಲ್ಲಿ ಪೋಸ್ಟ್ ಮಾಡಬೇಕು. ಅನುಚಿತ ಚಟುವಟಿಕೆ ಕಂಡುಬಂದರೆ ಖಂಡಿತವಾಗಿಯೂ ಅವರ ವಿರುದ್ಧ ವರದಿ ಮಾಡಬಹುದು.