ಬೆಂಗಳೂರು: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ ವಿಡಿಯೋದಲ್ಲಿ ಕೆ ಜಿ ಎಫ್ ಸಿನಿಮಾ ಹಾಡು ಬಳಸಿದ ಹಿನ್ನೆಲೆಯಲ್ಲಿ ಕಾಪಿ ರೈಟ್ ಉಲ್ಲಂಘನೆ ಆರೋಪದಡಿ ಕಾಂಗ್ರೆಸ್ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯ ಆದೇಶ ನೀಡಿದೆ. ಈ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಟ್ವಿಟರ್ ನಲ್ಲಿದ್ದ ವಿಡಿಯೋ ಹಾಡಿನ ತುಣುಕನ್ನು ತೆಗೆದು ಹಾಕುವುದಾಗಿ ಕಾಂಗ್ರೆಸ್ ತಿಳಿಸಿದ್ದು, ಟ್ವಿಟರ್ ಖಾತೆಯನ್ನು ಮತ್ತೆ ಓಪನ್ ಮಾಡಲು ಅವಕಾಶ ನೀಡುವಂತೆ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ತುರ್ತು ವಿಚಾರಣೆ ನಡೆಸುವಂತೆಯೂ ಅರ್ಜಿ ಸಲ್ಲಿಸಲಾಗಿದೆ.