ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ ಈಗ ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಪಾಲಾಗಿದೆ. ಟ್ವಿಟರ್ ತಮ್ಮ ತೆಕ್ಕೆಗೆ ಬರುತ್ತಿದ್ದಂತೆ ಸಿಇಓ ಪರಾಗ್ ಅಗರ್ವಾಲ್ ಅವರನ್ನು ಮನೆಗೆ ಕಳುಹಿಸಿದ್ದ ಎಲಾನ್ ಮಸ್ಕ್, ಈಗ ಮತ್ತಷ್ಟು ಮಹತ್ವದ ಬದಲಾವಣೆಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಟ್ವಿಟ್ಟರ್ ಬಳಕೆದಾರರು ಬ್ಲೂ ಟಿಕ್ ಪಡೆಯಲು ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನಲಾಗಿದ್ದು, ಇದಕ್ಕಾಗಿ ಮಾಸಿಕ 4.99 ಡಾಲರ್ (411 ರೂಪಾಯಿ) ಶುಲ್ಕ ವಿಧಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಹಣ ಪಾವತಿ ಮಾಡದಿದ್ದರೆ ಬ್ಲೂ ಟಿಕ್ ಕಳೆದುಕೊಳ್ಳಬೇಕಾಗುತ್ತದೆ.
ಆದರೆ ಈ ಪ್ರಸ್ತಾವನೆ ಇನ್ನೂ ಆರಂಭಿಕ ಹಂತದಲ್ಲಿದೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಇದರ ಜೊತೆಗೆ ರದ್ದುಗೊಂಡಿರುವ ಖಾತೆಗಳನ್ನು ಮರುಪರಿಶೀಲಿಸಿ ಮತ್ತೆ ಬಳಕೆದಾರರಿಗೆ ನೀಡಬಹುದು ಎಂದು ಹೇಳಲಾಗುತ್ತಿದೆ.