ನವದೆಹಲಿ: ಟ್ವಿಟರ್ ಗೆ ಕೊನೇಯ ಎಚ್ಚರಿಕೆಯ ನೋಟೀಸ್ ಜಾರಿ ಮಾಡಿರುವ ಕೇಂದ್ರ ಸರ್ಕಾರ ತಕ್ಷಣ ಹೊಸ ಐಟಿ ಮಾರ್ಗಸೂಚಿಯನ್ನು ಪಾಲಿಸುವಂತೆ ಖಡಕ್ ಸೂಚನೆ ನೀಡಿದೆ.
ಸೋಷಿಯಲ್ ಮೀಡಿಯಾಗಳು ಹೊಸ ಐಟಿ ನೀತಿಗಳನ್ನು ಅಳವಡಿಸಿಕೊಳ್ಳಲು ಈಗಾಗಲೆ ನೀಡಲಾಗಿದ್ದ ಗಡುವು ಮೇ 26ಕ್ಕೆ ಅಂತ್ಯವಾಗಿದೆ. ಆದರೂ ಟ್ವಿಟರ್ ಹೊಸ ನೀತಿಯನ್ನು ಅನುಸರಿಸಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಕೊನೆಯ ನೋಟೀಸ್ ನೀಡಿರುವ ಕೇಂದ್ರ ಸರ್ಕಾರ ಶೀಘ್ರವೇ ಕೇಂದ್ರ ಸರ್ಕಾರದ ಹೊಸ ಐಟಿ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳಬೇಕು. ಟ್ವಿಟರ್ ಗೆ ದೂರು ಪರಿಹಾರಕ್ಕೆ ಸೂಕ್ತ ವ್ಯವಸ್ಥೆಯಿರಬೇಕು. ಜನರಿಗೆ ಸುರಕ್ಷತೆ ವಾತಾವರಣ ಕಲ್ಪಿಸಬೇಕು ಎಂದು ಸೂಚಿಸಿದೆ.
ಒಂದುವೇಳೆ ಹೊಸ ಐಟಿ ಮಾರ್ಗಸೂಚಿ ಪಾಲಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ. ಐಟಿ ಕಾಯ್ದೆ 79 ಅಡಿ ನೀಡಲಾಗುವ ವಿನಾಯಿತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದೆ.