ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ಸಂಸದ ಮನೋಜ್ ತಿವಾರಿ ದೆಹಲಿ ಪೊಲೀಸರ ಕ್ಷಮೆ ಕೋರಿದ್ದಾರೆ. ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಎಂಬ ಕ್ಯಾಂಪೇನ್‌ನಲ್ಲಿ ಮನೋಜ್ ತಿವಾರಿ ಪಾಲ್ಗೊಂಡಿದ್ದರು. ಈ ವೇಳೆ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದಾರೆ.
ರಾಯಲ್ ಎನ್‌ಫೀಲ್ಡ್ ಬೈಕ್ ಏರಿದ್ದ ಮನೋಜ್ ತಿವಾರಿ ಹೆಲ್ಮೆಟ್ ಹಾಕಿರಲಿಲ್ಲ, ಕ್ಯಾಂಪೇನ್‌ನಲ್ಲಿ ಪಾಲ್ಗೊಂಡಿದ್ದ ಇತರರು ಹೆಲ್ಮೆಟ್ ಧರಿಸಿದ್ದರು. ಆದ್ರೆ ದಂಡಂ ದಶಗುಣಂ ಎಂಬಂತೆ ಕ್ಷಮೆ ಕೇಳುವ ಮುನ್ನವೇ ದೆಹಲಿ ಪೊಲೀಸರು ಮನೋಜ್ ತಿವಾರಿ ಅವರಿಗೆ 21,000 ರೂಪಾಯಿ ದಂಡ ಹಾಕಿದ್ದಾರೆ.
ಕೆಂಪು ಕೋಟೆ ಬಳಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಮನೋಜ್ ತಿವಾರಿ, ಪೊಲೀಸರ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಟ್ವಿಟ್ಟರ್ ಮೂಲಕ ಕ್ಷಮೆ ಕೋರಿರುವ ಸಂಸದ, ದಂಡದ ಮೊತ್ತವನ್ನು ಪಾವತಿಸುವುದಾಗಿ ತಿಳಿಸಿದ್ದಾರೆ.
ಕೇವಲ ಹೆಲ್ಮೆಟ್ ಧರಿಸದೇ ಇರುವುದು ಮಾತ್ರವಲ್ಲ ತಿವಾರಿ ಅವರು ಓಡಿಸ್ತಿದ್ದ ಬೈಕ್‌ಗೆ ಎಚ್‌ಎಸ್‌ಆರ್‌ಪಿ ಇರಲಿಲ್ಲ. ಸೂಕ್ತವಾದ ಮಾಲಿನ್ಯ ಪರಿಶೀಲನಾ ಪ್ರಮಾಣ ಪತ್ರವೂ ಇರಲಿಲ್ಲ. ಮೂರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 21,000 ರೂಪಾಯಿ ದಂಡ ಹಾಕಲಾಗಿದೆ. ಬೈಕ್ ಮಾಲೀಕರಿಗೂ 20,000 ರೂಪಾಯಿ ದಂಡ ವಿಧಿಸಲಾಗಿದೆ.