ಕೋಲಾರ; ಕೆಂಪುರಾಣಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಹಲವು ಮಾರುಕಟ್ಟೆಗಳಲ್ಲಿ ಟೊಮೆಟೊ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆ ಏರಿಕೆ ನಡುವೆ ಟೊಮೆಟೊ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.
ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎಂದೇ ಜನಪ್ರಿಯವಾಗಿರುವ ಕೋಲಾರದ ಎಪಿಎಂಸಿ ಟೊಮೆಟೊ ಮಾರುಕಟ್ಟೆಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.
24ಗಂಟೆಯೂ ಟೊಮೆಟೊ ಮಾರುಕಟ್ಟೆ ಕಾವಲಿಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಕೋಲಾರ ಎಸ್ ಪಿ ನಾರಾಯಣ ಮಾಹಿತಿ ನಿಡಿದ್ದಾರೆ. ಪೊಲೀಸ್ ಭದ್ರತೆ ಜೊತೆ ಮಾರುಕಟ್ಟೆಯಾದ್ಯಂತ ಸಿಸಿಟಿವಿ ಅಳವಡಿಸಲಾಗಿದೆ.
ದೇಶಾದ್ಯಂತ ಟೊಮೆಟೊ ಬೆಲೆ ಗಗನಮುಖಿಯಾಗಿದ್ದು, ಇದೇ ರೀತಿ ಬೆಲೆ ಏರಿಕೆಯಾದರೆ ಈಗಾಗಲೇ ಮನೆಯ ಊಟ, ತಿಂಡಿ, ಹೋಟೆಲ್ ಫುಡ್ ಗಳಲ್ಲಿ ಮಾಯವಾಗಿರುವ ಟೊಮೆಟೊವನ್ನು ಮುಂದಿನ ದಿನಗಳಲ್ಲಿ ಚಿತ್ರಗಳಲ್ಲಿ ನೋಡಬೇಕಾದ ಸ್ಥಿತಿ ಬಂದರೂ ಅಚ್ಚರಿಯಿಲ್ಲ.