ಚಿಕ್ಕಮಗಳೂರು: ಇವರಿಗೂ, ಟಿಪ್ಪು-ಔರಂಗಾಜೇಬಿಗೂ ಏನು ಸಂಬಂಧ, ನಾವು ಇವರನ್ನೆಲ್ಲ ಟೀಕಿಸಿದರೆ ಸಿದ್ದರಾಮಯ್ಯನವರಿಗೆ ಯಾಕೆ ಉರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ನಮಗೆ ಆರ್.ಎಸ್.ಎಸ್, ಬಸವಣ್ಣ ಅವರ ಜತೆ ವೈಚಾರಿಕ ಸಂಬಂಧಗಳಿವೆ. ಸ್ವಾಮಿ ವಿವೇಕಾನಂದ, ರಾಮಕೃಷ್ಣರು, ನಾರಾಯಣಗುರು, ಶ್ರೀರಾಮ, ಕೃಷ್ಣ ಇವರೆಲ್ಲರ ಜತೆ ಸಾಂಸ್ಕೃತಿಕ ಸಂಬಂಧವಿದೆ. ಆದರೆ ಇವರಿಗೆ ಟಿಪ್ಪು-ಔರಂಗಜೇಬ, ಘಜ್ನಿ, ಬಾಬರ್ ಜತೆ ಏನು ಸಂಬಂಧ? ನಾವು ಅವರನ್ನೆಲ್ಲ ಟೀಕಿಸಿದರೆ ಇವರು ಯಾಕೆ ಎದೆ ಬಡಿದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ನಮಗೆಲ್ಲ ಆರ್.ಎಸ್.ಎಸ್ ನಿಂದ ಪ್ರೇರಣೆ ಸಿಕ್ಕಿದೆ. ಆದರೆ ಸಿದ್ದರಾಮಯ್ಯನವರಿಗೆ ಟಿಪ್ಪು, ಘೋರಿ, ಬಾಬರ್ ಗಳಿಂದ ಪ್ರೇರಣೆ ಸಿಕ್ಕಿದೆಯಾ? ಈ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದರು.