ಜಾನ್ಸನ್ ಅಂಡ್ ಜಾನ್ಸನ್ ಅವರ ಜನಪ್ರಿಯ ಉತ್ಪನ್ನವಾದ ಟಾಲ್ಕಮ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಆರೋಪ ಕೇಳಿ ಬಂದಿದ್ದ ಬಳಿಕ ಇದೀಗ ಕಂಪನಿ ಇದರ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಮುಂದಿನ ವರ್ಷದಿಂದ ಟಾಲ್ಕ್ ಇರುವ ಬೇಬಿ ಪೌಡರ್ ಮಾರಾಟ ಮಾಡುವುದಿಲ್ಲವೆಂದು ಜಾನ್ಸನ್ ಅಂಡ್ ಜಾನ್ಸನ್ ತಿಳಿಸಿದ್ದು, ಇದರ ಬದಲಿಗೆ ಜೋಳದ ಹಿಟ್ಟನ್ನು ಬಳಸಿದ ಬೇಬಿ ಪೌಡರ್ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಈ ಮೊದಲು ಅಮೆರಿಕ ಹಾಗೂ ಕೆನಡಾದಲ್ಲಿ ಟಾಲ್ಕಮ್ ಬೇಬಿ ಪೌಡರ್ ಬಳಸಿದ ಕಾರಣಕ್ಕೆ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇವರುಗಳು ದೊಡ್ಡ ಮೊತ್ತದ ಪರಿಹಾರ ಕೇಳಿದ್ದು, ಇದರಿಂದಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಇಕ್ಕಟ್ಟಿಗೆ ಸಿಲುಕಿತ್ತು.