ಹೈದರಾಬಾದ್: ಬಾಲಿವುಡ್, ಸ್ಯಾಂಡಲ್ ವುಡ್ ಬಳಿಕ ಇದೀಗ ಟಾಲಿವುಡ್ ನಲ್ಲೂ ನಶೆಯ ನಂಟಿನ ಪ್ರಕರಣ ಮುನ್ನೆಲೆಗೆ ಬಂದಿದೆ. ಡ್ರಗ್ಸ್ ಸೇವನೆ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ನಟ ರವಿತೇಜ, ನಟಿ ಚಾರ್ಮಿ ಕೌರ್, ಪುರಿ ಜಗನ್ನಾಥ್ ಹೆಸರು ಉಲ್ಲೇಖಿಸಲಾಗಿದೆ.
ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಸೇವನೆ, ಮಾರಾಟ ವಿಚಾರವಾಗಿ ಖ್ಯಾತ ನಾಮರ ಹೆಸರು ಬಹಿರಂಗವಾಗಿದೆ. ಡ್ರಗ್ಸ್ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ರವಿತೇಜ, ಚಾರ್ಮಿ ಕೌರ್, ತರುಣ್, ಮೊಮೈತ್ ಖಾನ್, ನಿರ್ದೇಶಕ ಪುರಿ ಜಗನ್ನಾಥ್, ಸುಬ್ಬರಾಜು ಸೇರಿದಂತೆ 12 ಜನರ ಹೆಸರನ್ನು ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಡೆಲ್ಟಾ ವೈರಸ್ ಅಟ್ಟಹಾಸ; 268 ಜನರಲ್ಲಿ ಸೋಂಕು ದೃಢ; ಇಬ್ಬರಲ್ಲಿ ಕಪ್ಪಾ ಪತ್ತೆ
ಈ ನಡುವೆ ಡ್ರಗ್ಸ್ ಪ್ರಕರಣ ಸಂಬಂಧ ನಟ ರಾಣಾ ದಗ್ಗುಬಾಟಿಯವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.