ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ ನ ಮಾಜಿ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಎಫ್ ಐ ಆರ್ ದಾಖಲಾಗಿದೆ.
ಬಿಟಿಸಿ ಮಾಜಿ ಅಧ್ಯಕ್ಷ ಹರೀಂದರ್ ಶೆಟ್ಟಿ ವಿರುದ್ಧ ಟರ್ಫ್ ಕ್ಲಬ್ ಸದಸ್ಯೆಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹರೀಂದರ್ ಶೆಟ್ಟಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಟರ್ಫ ಕ್ಲಬ್ ಸದಸ್ಯೆಗೆ ಹರೀಂದರ್ ಶೆಟ್ಟಿ 2022ರ ಜುಲೈನಿಂದ ಕರೆ ಮಾಡಿ ಟಾರ್ಚರ್ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.