ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ವಾರಣಾಸಿ ಜಿಲ್ಲಾ ಕೋರ್ಟ್ ಗೆ ವರ್ಗಾವಣೆ ಮಾಡಿ ಮಹತ್ವದ ಆದೇಶ ನೀಡಿದೆ.
ಜ್ಞಾನವಾಪಿ ಪ್ರಕರಣದ ಬಗ್ಗೆ ಮೇ 17ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮದ್ಯಂತರ ಆದೇಶ (ಮಸೀದಿಯಲ್ಲಿನ ಶಿವಲಿಂಗ ರಕ್ಷಿಸುವ ಬಗ್ಗೆ) ಮುಂದುವರೆಯುತ್ತದೆ. ಪ್ರಕರಣದ ಬಗ್ಗೆ ವಾರಣಾಸಿ ಕೋರ್ಟ್ ವಿಚಾರಣೆ ಪರವಾಗಿದೆ ಎಂದು ಹೇಳಿದೆ.
ಆದರೆ ಜಿಲ್ಲಾ ನ್ಯಾಯಾಧೀಶರು ಅದನ್ನು ಪಾಲಿಸಬೇಕು. ಮೊಕದ್ದಮೆಯನ್ನು ವಿಚಾರಣಾ ನ್ಯಾಯಾಧೀಶರ ಬದಲಿಗೆ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲಾಗುವುದು. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು ಅನುಭವಿಗಳು ಆಲಿಸುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.