![](https://kannadadunia.com/wp-content/uploads/2022/06/8cc8b36e-0b0b-4025-bb0c-507b32681569.jpg)
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಚಿಟುಗು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಜ್ಞಾನಭಾಸ್ಕರ ಸ್ವಾಮೀಜಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಬೆಳಿಗ್ಗೆ ಮಠದ ಸ್ನಾನದ ಗೃಹದಲ್ಲಿ ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ. ಸ್ನಾನಕ್ಕೆ ನೀರು ಕಾಯಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶ್ವಕರ್ಮ ಸಮಾಜದ ಒಕ್ಕೂಟದಲ್ಲಿರುವ 63 ಸ್ವಾಮೀಜಿಗಳ ಪೈಕಿ ಜ್ಞಾನಭಾಸ್ಕರ ಸ್ವಾಮೀಜಿಯವರೂ ಪ್ರಮುಖರಾಗಿದ್ದರು.