ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಅವರ ಜೊತೆಗಿದ್ದವರೇ ಪಕ್ಕಾ ಪ್ಲಾನ್ ಮಾಡಿ ಹತ್ಯೆ ನಡೆಸಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ಪ್ರಮುಖವಾಗಿ ರೇಖಾ ಕದಿರೇಶ್ ಅವರ ಬಾಡಿಗಾರ್ಡ್ ಹಾಗೂ ಸಹಚರನಿಂದಲೇ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ರೇಖಾ ಅವರ ಬಾಡಿಗಾರ್ಡ್ ಆಗಿದ್ದ ಪೀಟರ್ (21 ) ಹಾಗೂ ಆತನ ಸಹಚರ ಸೂರ್ಯ (19) ಎಂಬುವವರ ಮೇಲೆ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆಯುವ ವೇಳೆ ಜೊತೆಗಿದ್ದರು ಎನ್ನಲಾಗಿದೆ.
ಮಕ್ಕಳ ʼಬಾಲ್ ಆಧಾರ್ʼ ಕಾರ್ಡ್ ಬಗ್ಗೆ ಇಲ್ಲಿದೆ ಮಾಹಿತಿ
ಇಂದು ಬೆಳಿಗ್ಗೆ ಬಿಬಿಎಂಪಿ ವಾರ್ಡ್ ಕಚೇರಿಯಲ್ಲಿ ಫುಡ್ ಕಿಟ್ ವಿತರಣೆಗೆಂದು ರೇಖಾ ಬಂದಿದ್ದರು. ರೇಖಾ ಕೊಲೆಗೂ ಮೊದಲೇ ಕಚೇರಿಯಲ್ಲಿನ ಎರಡು ಸಿಸಿಟಿವಿ ಕ್ಯಾಮರಾಗಳನ್ನು ಸಾಕ್ಷಿ ಸಿಗದಂತೆ ಮೇಲ್ಭಾಗಕ್ಕೆ ತಿರುಗಿಸಲಾಗಿತ್ತು. ಆರೋಪಿಗಳು ಪಕ್ಕಾ ಪ್ಲಾನ್ ಮಾಡಿಯೇ ಕೃತ್ಯವೆಸಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
BIG NEWS: ರೇಖಾ ಕದಿರೇಶ್ ಹತ್ಯೆ ಪ್ರಕರಣ; ಇದು ರಾಜಕೀಯ ಪ್ರೇರಿತ ಕೊಲೆ; ಎನ್.ಆರ್.ರಮೇಶ್ ಗಂಭೀರ ಆರೋಪ
ಇನ್ನು ಬಿಬಿಎಂಪಿ ಮಾಜಿ ಸದಸ್ಯೆ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಇಂದು ಬೆಳಿಗ್ಗೆ ಬಿಬಿಎಂಪಿ ವಾರ್ಡ್ ಕಚೇರಿಗೆ ಫುಡ್ ಕಿಟ್ ವಿತರಣೆಗೆ ಆಗಮಿಸಿದ್ದ ವೇಳೆ ರೇಖಾ ಅವರ ಮೇಲೆ ಇಬ್ಬರು ದಾಳಿ ನಡೆಸಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ತನಿಖೆ ನಡೆಯುತ್ತಿರುವುದರಿಂದ ಈ ಬಗ್ಗೆ ಯಾವುದೇ ಮಾಹಿತಿ ನೀಡಲಾಗದು ಎಂದು ತಿಳಿಸಿದ್ದಾರೆ.