ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದ ಸಾದಹಳ್ಳಿ ಜೇಡಿ ಗಾರ್ಡನ್ ಬಳಿ ಜೇಡ್-735 ವಿಲ್ಲಾದಲ್ಲಿ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ಉದ್ಯಮಿ ಅಂಕಿತ್ ಜೈನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಹಲವು ವಿದೇಶಿ ಯುವತಿಯರನ್ನು ರಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಾರ್ಟಿಯಲ್ಲಿ ಗಣಿ ಉದ್ಯಮಿ ಪುತ್ರ, ಶಾಸಕರ ಮಕ್ಕಳು, ಉದ್ಯಮಿಗಳು ಸೇರಿದಂತೆ ಹಲವು ಪ್ರಭಾವಿಗಳ ಪುತ್ರರು ಭಾಗಿಯಾಗಿದ್ದರು ಎನ್ನಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇದೀಗ ಅಂಕಿತ್ ಜೈನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಂಕಿತ್ ಜೈನ್ ರೇವ್ ಪಾರ್ಟಿ ನಡೆದಿದ್ದ ವಿಲ್ಲಾ ಮಾಲೀಕ ಶ್ರೀನಿವಾಸ್ ಸುಬ್ರಹ್ಮಣ್ಯಂನ ಪಾರ್ಟ್ ನರ್ ಆಗಿದ್ದು, ಬಳ್ಳಾರಿ, ಬೆಂಗಳೂರು ಮಾತ್ರವಲ್ಲ ವಿದೇಶಗಳಲ್ಲಿಯೂ ಆಸ್ತಿ ಹೊಂದಿದ್ದಾನೆ. ಇನ್ನು ವಿಲ್ಲಾ ಮಾಲೀಕ ಶ್ರೀನಿವಾಸ್ ಸುಬ್ರಹ್ಮಣ್ಯಂ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.